alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಪ್ಪಗಿದ್ದಾಳೆಂದು ಕೊಲೆ ಮಾಡಲೆತ್ನಿಸಿದ ಪತಿ

women789044ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ತನ್ನ ಪತ್ನಿ ಕಪ್ಪಗಿದ್ದಾಳೆಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ತನ್ನ ಸಹೋದರನ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಬಂತ್ವಾರಾಮ್ ಮಂಡಲ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ಪ್ರಭು ಎಂಬಾತನ ವಿವಾಹ ಮೂರು ವರ್ಷಗಳ ಹಿಂದೆ ಧರೂರ್ ಮಂಡಲ ವ್ಯಾಪ್ತಿಯ ಧರ್ಮಪುರ ಗ್ರಾಮದ ಲಕ್ಷ್ಮೀ ಎಂಬಾಕೆ ಜೊತೆ ನೆರವೇರಿತ್ತು. ಆಗಿನಿಂದಲೂ ಆಕೆಯ ಮೈ ಬಣ್ಣದ ಕುರಿತು ಅಸಮಾಧಾನ ಹೊಂದಿದ್ದ ಪ್ರಭು, ನೀನೇ ಆತ್ಮಹತ್ಯೆ ಮಾಡಿಕೋ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ.

ಲಕ್ಷ್ಮೀ ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಭುವನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿತ್ತೆಂದು ಹೇಳಲಾಗಿದೆ. ಆದರೂ ತನ್ನ ವರ್ತನೆ ತಿದ್ದಿಕೊಳ್ಳದ ಪ್ರಭು ತನ್ನ ಸಹೋದರ ಯಲ್ಲಯ್ಯನ ಜೊತೆ ಸೇರಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಆಗ ಲಕ್ಷ್ಮೀ ಕೂಗಿಕೊಂಡಿದ್ದು, ನೆರೆಹೊರೆಯವರು ಧಾವಿಸಿ ಬಂದ ಕಾರಣ ಸಹೋದರರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...