alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲು ಕಸಿ ಮಾಡಿಸಿಕೊಳ್ಳುವವರಿಗೊಂದು ಶಾಕಿಂಗ್ ನ್ಯೂಸ್

ತಲೆ ಬೋಳಾಗೋದು ಈಗ ಸಾಮಾನ್ಯ ಸಮಸ್ಯೆ. ಎಲ್ರೂ ತಲೆ ಬೋಳಾದ ತಕ್ಷಣ ಕೂದಲು ಕಸಿ ಮಾಡಿಸಿಕೊಳ್ತಾರೆ. ಇದು ಕೂದಲು ಉದುರುವಿಕೆಗೆ ಶಾಶ್ವತ ಪರಿಹಾರ ಅನ್ನೋದೇನೋ ಸತ್ಯ. ಆದ್ರೆ ಕೂದಲು ಕಸಿ ಚಿಕಿತ್ಸೆ ತುಂಬಾನೇ ಅಪಾಯಕಾರಿ.

ಹೈದ್ರಾಬಾದ್ ನಲ್ಲಿ ವ್ಯಕ್ತಿಯೊಬ್ಬ ಕೂದಲು ಕಸಿ ಮಾಡಿಸಿಕೊಂಡಿದ್ದ. ಆತನಿಗೆ ಮಧುಮೇಹ ಇದ್ದಿದ್ದರಿಂದ ಈಗ ಕಣ್ಣುಗಳೇ ಕಾಣಿಸುತ್ತಿಲ್ಲ. 2016ರ ಜುಲೈನಲ್ಲಿ ತಾರಿಕ್ ಖುಸ್ರು ಎಂಬಾತನಿಗೆ ಕೂದಲು ಕಸಿ ಮಾಡಲಾಗಿತ್ತು.

ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 2700 ಕೂದಲನ್ನು ಕಸಿ ಮಾಡಿದ್ದರು. ಇದಕ್ಕೆ 1,25,000 ರೂಪಾಯಿ ಖರ್ಚಾಗಿತ್ತು. ಸರ್ಜರಿಯಾದ ಮರುದಿನವೇ ತಾರಿಕ್ ನ ತಲೆ ಊದಿಕೊಂಡಿತ್ತು. ವಿಪರೀತ ಜ್ವರ ಬಂದಿತ್ತು.

ನಂತರ ಗ್ಯಾಸ್ ಗ್ಯಾಂಗ್ರಿನ್ ಸೋಂಕು ತಗುಲಿದ್ದರಿಂದ 26 ದಿನಗಳ ಕಾಲ ತಾರಿಕ್ ಐಸಿಯುನಲ್ಲಿದ್ದ. ವೈದ್ಯರ ನಿರ್ಲಕ್ಷದಿಂದಾಗಿ ತಾರಿಕ್ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿದೆ. ವೈದ್ಯರ ವಿರುದ್ಧ ತಾರಿಕ್ ದೂರು ನೀಡಿದ್ದರು.

ಆದ್ರೆ ಕೇವಲ 2 ವರ್ಷಗಳ ಕಾಲ ಅವರ ಲೈಸನ್ಸ್ ವಜಾ ಮಾಡಲಾಗಿದೆ. ಇದೀಗ ತಾರಿಕ್ ದೃಷ್ಟಿಯನ್ನೂ ಕಳೆದುಕೊಂಡಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾಡಿಸಿಕೊಂಡ ಚಿಕಿತ್ಸೆ ಅವರ ಬದುಕನ್ನೇ ಹಾಳು ಮಾಡಿಬಿಟ್ಟಿದೆ. ಹಾಗಾಗಿ ಕೂದಲು ಕಸಿ ಮಾಡಿಸಿಕೊಳ್ಳುವ ಮುನ್ನ ಅದರಿಂದಾಗುವ ಅಪಾಯಗಳ ಬಗ್ಗೆ ಗಮನವಿರಲಿ.

ಕೂದಲು ಕಸಿಯ ಬಳಿಕ ಒಂದು ರೀತಿಯ ಮರಗಟ್ಟುವಿಕೆ ಉಂಟಾಗುತ್ತದೆ. 18 ವಾರಗಳ ಬಳಿಕವೂ ಇದು ಹೋಗದೇ ಇದ್ದಲ್ಲಿ ಸಮಸ್ಯೆಯಾಗಿದೆ ಎಂದರ್ಥ. ಕೂದಲು ಕಸಿ ಪ್ರಕ್ರಿಯೆ ಬಳಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ಕಲೆ ಕೂಡ ಉಳಿದುಕೊಳ್ಳಬಹುದು.

ಕೂದಲು ಕಸಿ ಬಳಿಕ ಇನ್ಫೆಕ್ಷನ್ ಆಗುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ವೈದ್ಯರು ಕೂದಲು ಕಸಿ ಬಳಿಕ ಆ್ಯಂಟಿಬಯೊಟಿಕ್ಸ್ ನೀಡುತ್ತಾರೆ. ಕೂದಲು ಕಸಿ ಮಾಡಿದ ಜಾಗದಲ್ಲಿ ಸಿಸ್ಟ್ ಕೂಡ ಉಂಟಾಗುವ ಸಂಭವವಿರುತ್ತದೆ. ಕೆಲವು ವಾರಗಳ ಬಳಿಕವೂ ಸಿಸ್ಟ್ ಹಾಗೇ ಉಳಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...