alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲಿಗೆ ಹೆದರಿ ಹಾರಿಹೋಯ್ತು ಪ್ರಾಣ

ಹೈದರಾಬಾದ್: ಹಲ್ಲಿಗೆ ಹೆದರಿ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್ ನ ರಾಕ್ ಟೌನ್ ಪ್ರದೇಶದ ಫ್ಲ್ಯಾಟ್ ಒಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

75 ವರ್ಷದ ಲಕ್ಷ್ಮಿನಾರಾಯಣ ಮೂರ್ತಿ ಮೃತಪಟ್ಟವರು. 2 ದಿನಗಳ ಹಿಂದೆ ಅವರ ಪತ್ನಿ ಮತ್ತು ಮಕ್ಕಳು ವಿದೇಶದಿಂದ ವಾಪಸ್ ಆದ ಬಳಿಕ ಮೂರ್ತಿ ಮೃತಪಟ್ಟಿರುವ ಸಂಗತಿ ಗೊತ್ತಾಗಿದೆ.

ಸ್ನಾನ ಮುಗಿಸಿ ಹೊರ ಬಂದ ಮೂರ್ತಿ ಹಲ್ಲಿಯ ಮೇಲೆ ಕಾಲಿಟ್ಟಿದ್ದಾರೆ. ಭಯದಿಂದ ಆಯತಪ್ಪಿ ಬಿದ್ದು, ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಆಗಸ್ಟ್ 18 ರಂದೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಮನೆಯವರೆಲ್ಲಾ ವಿದೇಶಕ್ಕೆ ಹೋಗಿದ್ದು, ಮೂರ್ತಿ ಒಬ್ಬರೇ ವಾಸವಾಗಿದ್ದರು. ಅವರು ಸಾವನ್ನಪ್ಪಿರುವುದು ಅಕ್ಕಪಕ್ಕದವರಿಗೂ ಗೊತ್ತಾಗಿಲ್ಲ. ಮನೆಯ ಬಾಗಿಲು, ಕಿಟಕಿ ಹಾಕಿದ್ದ ಕಾರಣ ಶವದ ವಾಸನೆ ಬಂದಿಲ್ಲ. ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿದ್ದ ಕಾರಣ, ಮನೆಯವರು ಕೋಪದಿಂದ ಫೋನ್ ರಿಸೀವ್ ಮಾಡಿಲ್ಲವೆಂದು ಭಾವಿಸಿದ್ದಾರೆ.

1 ತಿಂಗಳಾದರೂ, ಪ್ರತಿಕ್ರಿಯೆ ಬಾರದ ಕಾರಣ, ಹೈದರಾಬಾದ್ ಗೆ ಬಂದಿದ್ದಾರೆ. ಪತ್ನಿ, ಮಕ್ಕಳು ಬಂದಾಗ, ಮನೆಯೊಳಗಿಂದ ಲಾಕ್ ಆಗಿದ್ದು, ಅನುಮಾನದಿಂದ ಒಳ ಪ್ರವೇಶಿಸಿದಾಗ, ಕೊಳೆತ ಸ್ಥಿತಿಯಲ್ಲಿದ್ದ ಮೂರ್ತಿಯವರ ಮೃತದೇಹ ಕಂಡು ಬಂದಿದೆ. ಅವರ ಕಾಲ ಬಳಿ ಸತ್ತ ಹಲ್ಲಿಯೂ ಕಂಡಿದ್ದು, ಇದರಿಂದಲೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ರಾಜಮಹೇಂದ್ರಿಯವರಾದ ಮೂರ್ತಿ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಫ್ಲ್ಯಾಟ್ ಗೆ ಬೀಗ ಹಾಕಿದ್ದ ಕಾರಣ, ಮಾಲೀಕರು ವಿದೇಶಕ್ಕೆ ತೆರಳಿರಬಹುದೆಂದು ನಿವಾಸಿಗಳು ಭಾವಿಸಿದ್ದಾರೆ. ಹಾಗಾಗಿ ಮೂರ್ತಿ ನಿಧನರಾಗಿ ತಿಂಗಳುಗಳೇ ಕಳೆದರೂ ಯಾರಿಗೂ ಗೊತ್ತಾಗೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...