alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಗೆ ಅಗೌರವ ತೋರಿದ ಇಬ್ಬರು ಅರೆಸ್ಟ್

arrest

ಥಿಯೇಟರ್ ಗಳಲ್ಲಿ ಸಿನೆಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ, ಈ ವೇಳೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕೆಂದು ಇತ್ತೀಚೆಗಷ್ಟೆ ಹೊಸ ನಿಯಮ ಜಾರಿಗೆ ತರಲಾಗಿತ್ತು. ಹೈದ್ರಾಬಾದ್ ನಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಗೀತೆಗೆ ಅಗೌರವ ತೋರಿದ ಇಬ್ಬರನ್ನು ಬಂಧಿಸಲು ನೆರವಾಗಿದ್ದಾನೆ.

ಕಚಿಗುಡಾದಲ್ಲಿರುವ ಮಹೇಶ್ವರಿ ಪರಮೇಶ್ವರಿ ಮಾಲ್ ನ ಐನಾಕ್ಸ್ ನಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರಗೀತೆ ಪ್ರಸಾರದ ವೇಳೆ ಸೈಯದ್ ಶಫಿ ಹುಸೇನ್ ಹಾಗೂ ಮೊಹಮ್ಮದ್ ಇಲ್ಯಾಸ್ ಎದ್ದು ನಿಂತಿರಲಿಲ್ಲ. ಪತ್ರಕರ್ತ ಎ.ಸಂಪತ್ ಎಂಬಾತ ಇವರಿಬ್ಬರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ.

ಐನಾಕ್ಸ್ ನಲ್ಲಿ ‘ಚಿತ್ರಾಂಗದಾ’ ಸಿನೆಮಾ ಪ್ರದರ್ಶನಗೊಳ್ತಾ ಇತ್ತು. ಎದ್ದು ನಿಂತುಕೊಳ್ಳುವಂತೆ ಮನವಿ ಮಾಡಿದ್ರೂ ಕೇಳದೆ ರಾಷ್ಟ್ರಗೀತೆಯನ್ನು ಅವಮಾನಿಸಿದ್ದರಿಂದ ಕೋಪಗೊಂಡು ಅವರ ಬಂಧನಕ್ಕೆ ಸಹಕರಿಸಿರೋದಾಗಿ ಸಂಪತ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...