alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟ್ರೋಜನ್ ಸೇವಿಸಿ ಕಾರಿನಲ್ಲೇ ಪ್ರಾಣಬಿಟ್ಟ ಯುವಕ

car-generic-istock_650x400_41464581693

ಹೈದ್ರಾಬಾದ್ ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಪಾರ್ಕ್ ಮಾಡಿದ್ದ ಕಾರಿನಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇದ್ದ 28 ವರ್ಷದ ಅವಿನಾಶ್, ನೈಟ್ರೋಜನ್ ಹೈಡೋಸ್ ಸೇವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಹೈದರ್ ನಗರದ ಬಳಿ ಕಾರನ್ನು ಪಾರ್ಕ್ ಮಾಡಿದ್ದ ಅವಿನಾಶ್ ಅದರಲ್ಲಿ ಕುಳಿತು ಗ್ಯಾಸ್ ಮಾಸ್ಕ್ ಮೂಲಕ ನೈಟ್ರೋಜನ್ ಅನ್ನು ಸೇವಿಸಿದ್ದ. ಆತ ಮೃತಪಟ್ಟು ಮೂರು ದಿನಗಳೇ ಕಳೆದಿತ್ತು. ಸಮೀಪದ ಮನೆಯವರು ವಾಸನೆ ಬರ್ತಾ ಇರೋದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು.

ಪೊಲೀಸರ ತಪಾಸಣೆ ವೇಳೆ ಅವಿನಾಶ್ ಶವ ಪತ್ತೆಯಾಗಿದೆ. ಅವಿನಾಶ್ ಸುಸೈಡ್ ನೋಟ್ ಕೂಡ ಬರೆದಿಟ್ಟಿದ್ದಾನೆ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆ ನಿರಾಕರಿಸಿದ್ರಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬರೆದಿದ್ದಾನೆ. ಹಣಕಾಸಿನ ತೊಂದರೆ ಕೂಡ ಆತ್ಮಹತ್ಯೆಗೆ ಕಾರಣ ಅಂತಾ ಉಲ್ಲೇಖಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...