alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ತುರ್ತಾಗಿ ಭೇಟಿಯಾಗಲು ಪೊಲೀಸರ ವಾಹನವನ್ನೇ ಕದ್ದ ಭೂಪ…!

ಪ್ರೀತಿಗಾಗಿ ಕೆಲವರು ಎಂತಹ ರಿಸ್ಕ್ ಗಳನ್ನಾದರೂ ತೆಗೆದುಕೊಳ್ಳಲು ಸಿದ್ದವಾಗಿರ್ತಾರೆ. ಮುಂದಿನ ಆಗುಹೋಗುಗಳ ಪರಿಣಾಮವನ್ನೇ ಅವರುಗಳು ಲೆಕ್ಕಿಸುವುದಿಲ್ಲ. ಅಂತಹುದೇ ಘಟನೆಯೊಂದರ ಸುದ್ದಿ ಇಲ್ಲಿದೆ.

ಹೈದರಾಬಾದಿನಲ್ಲಿ ಈ ಘಟನೆ ನಡೆದಿದ್ದು, ತಿರುಪತಿ ಲಿಂಗರಾಜು ಎಂಬ 30 ವರ್ಷದ ವ್ಯಕ್ತಿ ಪೋಲೀಸ್ ವ್ಯಾನ್ ಚಾಲಕನ ಗಮನವನ್ನು ಬೇರೆಡೆ ಸೆಳೆದು ವ್ಯಾನ್ ಅಪಹರಿಸಿಕೊಂಡು ಪರಾರಿಯಾಗಿದ್ದಾನೆ.

ಇದರಿಂದ ಆತಂಕಗೊಂಡ ಪೊಲೀಸರು, ಎಲ್ಲೆಡೆ ಮಾಹಿತಿ ಮುಟ್ಟಿಸಿ ಅಲರ್ಟ್ ಆಗಿದ್ದಾರೆ. ಕಡೆಗೂ ಕೃಷ್ಣ ಜಿಲ್ಲೆಯ ಚೆಕ್ ಪೋಸ್ಟ್ ಬಳಿ ವ್ಯಾನ್ ಪತ್ತೆಯಾಗಿದೆ. ವ್ಯಾನಿನಲ್ಲಿ ತಿರುಪತಿ ಲಿಂಗರಾಜು ಮತ್ತು ಆತನ ನಾಲ್ವರು ಸ್ನೇಹಿತರಿದ್ದು, ಅವರುಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಚ್ಚರಿಯ ಸಂಗತಿ ಬಯಲಾಗಿದೆ.

ಖಮ್ಮಂ ಜಿಲ್ಲೆಯ ಜಗನ್ನಾಥ ಪುರಂನಲ್ಲಿರುವ ಪತ್ನಿಯನ್ನು ತುರ್ತಾಗಿ ಭೇಟಿಯಾಗುವ ಸಲುವಾಗಿ ವ್ಯಾನ್ ಅಪಹರಿಸಿದ್ದಾಗಿ ತಿರುಪತಿ ಲಿಂಗರಾಜು ತಿಳಿಸಿದ್ದಾನೆ. ಇದೀಗ ತಿರುಪತಿ ಲಿಂಗರಾಜು ಮತ್ತು ಆತನ ನಾಲ್ವರು ಸ್ನೇಹಿತರು ಜೈಲುಪಾಲಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...