alex Certify
ಕನ್ನಡ ದುನಿಯಾ       Mobile App
       

Kannada Duniya

ಮಾತನಾಡುವಾಗಲೇ ಮೊಬೈಲ್ ಬ್ಲಾಸ್ಟ್ !

pon 56

ಹೈದರಾಬಾದ್: ಇತ್ತೀಚೆಗೆ ಮೊಬೈಲ್ ಬಳಸುವವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿಯೂ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ನಾನಾ ರೀತಿಯ ಮೊಬೈಲ್ ಲಗ್ಗೆ ಇಟ್ಟಿವೆ.

ಕೆಲವೊಮ್ಮೆ ಮೊಬೈಲ್ ಗಳಲ್ಲಿ ತಾಂತ್ರಿಕ ದೋಷದಿಂದ ಅನಾಹುತ ಸಂಭವಿಸಿದ ಉದಾಹರಣೆಗಳಿವೆ. ಅಂತಹ ಒಂದು ಮೊಬೈಲ್ ದುರಂತದ ಪ್ರಕರಣ ನಡೆದಿದೆ. ವಿಜಯವಾಡದ ಚಿಕ್ಕಡಪಲ್ಲಿ ಎಂಬಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಪೋಟ ಸಂಭವಿಸಿ ವ್ಯಕ್ತಿಯೊಬ್ಬರ ಕಿವಿಗೆ ಹಾನಿಯಾಗಿದೆ. 32 ವರ್ಷದ ನಾಗೇಶ್ವರ ರಾವ್ 6 ತಿಂಗಳ ಹಿಂದಷ್ಟೇ ನೋಕಿಯಾ 640 ಎಕ್ಸ್ ಎಲ್ ಸ್ಮಾರ್ಟ್ ಫೋನ್ ಅನ್ನು 20,000 ರೂ. ನೀಡಿ ಖರೀದಿಸಿದ್ದರು. ಅದರಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಬದಲಿಸಿಕೊಡುವಂತೆ ಮಾರಾಟಗಾರರಿಗೆ ತಿಳಿಸಿದ್ದರು.

ಆದರೆ, ಮಾರಾಟಗಾರರು ಸ್ಪಂದಿಸದ ಕಾರಣ ಅದನ್ನೇ ಬಳಸಿದ್ದಾರೆ. ಆದರೆ, ಅದು ಮಾತನಾಡುವಾಗಲೇ ಏಕಾಏಕಿ ಬ್ಲಾಸ್ಟ್ ಆಗಿದ್ದು, ಇದರಿಂದ ನಾಗೇಶ್ವರ ರಾವ್ ಅವರ ಕಿವಿಗೆ ಹಾನಿಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...