alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಗಾಂಜಾ ಬೆಳೆದಿದ್ದ ಭೂಪ…!

ganja-leavesವ್ಯಕ್ತಿಯೊಬ್ಬ ತನ್ನ ಮೂರು ಬೆಡ್ ರೂಂ ಫ್ಲಾಟ್ ನಲ್ಲೇ ವ್ಯವಸ್ಥಿತವಾಗಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದು, ಸೋಮವಾರದಂದು ಹೈದರಾಬಾದ್ ನ ನರಸಿಂಗಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸೈಯ್ಯದ್ ಹುಸೇನ್ ಎಂಬ ಈ ವ್ಯಕ್ತಿ, ತನ್ನ ಮನೆಯಲ್ಲಿಯೇ ಪಾಟ್ ಗಳಲ್ಲಿ ಗಾಂಜಾ ಬೆಳೆದಿದ್ದು, ಬೆಳೆಯಲು ಅನುಕೂಲವಾಗುವಂತೆ ಕೃತಕ ಲೈಟ್, ಏರ್ ಕಂಡೀಷನರ್ ಸಹ ಅಳವಡಿಸಿದ್ದ. ಹೈದರಾಬಾದ್ ನಗರದಲ್ಲಿ ವ್ಯಕ್ತಿಯೊಬ್ಬ ಗಾಂಜಾ ಸರಬರಾಜು ಮಾಡುತ್ತಿರುವ ಮಾಹಿತಿ ಹೊಂದಿದ್ದ ಪೊಲೀಸರು, ತನಿಖೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಬಾರದಿರಲು ಈತ ಹಲವು ಮುಂಜಾಗರೂಕತಾ ಕ್ರಮ ಕೈಗೊಂಡಿದ್ದ. ಆದರೆ ಪೊಲೀಸರು ಕಡೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 60 ಪಾಟ್ ಗಳಲ್ಲಿ ಈತ ಗಾಂಜಾವನ್ನು ಬೆಳೆದಿದ್ದು, ಇವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...