alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ನಲ್ಲಿ ಪತನವಾಯ್ತು ತರಬೇತಿ ವಿಮಾನ

ಹೈದರಾಬಾದ್: ಹೈದರಾಬಾದ್ ಹೊರವಲಯದ ಹಕೀಂಪೇಟೆಯ ಸಮೀಪ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನವಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಮಹಿಳಾ ಪೈಲಟ್ ಗಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತರಬೇತಿ ನಿರತವಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಿಸಲು ಯತ್ನಿಸಲಾಗಿದೆ. ಆದರೆ, ಬಿಡಿಭಾಗಗಳು ಕಳಚಿ ಬಿದ್ದು, ಬೆಂಕಿ ತಗುಲಿದ್ದು, ಮಹಿಳಾ ಪೈಲಟ್ ಗಳು ಪಾರಾಗಿದ್ದಾರೆ.

ಪ್ಯಾರಾಚೂಟ್ ನೆರವಿನಿಂದ ಅವರು ಬಚಾವ್ ಆಗಿದ್ದು, ಹಕೀಂಪೇಟೆ ವಾಯುನೆಲೆಯಿಂದ 50 ಕಿಲೋ ಮೀಟರ್ ದೂರದಲ್ಲಿ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಕಳೆದ 2 ತಿಂಗಳ ಅವಧಿಯಲ್ಲಿ ಹೈದರಾಬಾದ್ ಬಳಿ ನಡೆದ 2 ನೇ ಅಪಘಾತ ಇದಾಗಿದೆ. ಸೆಪ್ಟಂಬರ್ 28 ರಂದು ಅಂಕೆರೆಡ್ಡಿಪಲ್ಲಿಯಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಅಕ್ಟೋಬರ್ 30 ರಂದು ಹೆಲಿಕಾಪ್ಟರ್ ಬಾಗಿಲು ಬೇರ್ಪಟ್ಟು ಲಾಲ್ ಗುಡಾದಲ್ಲಿನ ಮನೆಯೊಂದರ ಮೇಲೆ ಬಿದ್ದಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...