alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂಗಳ ಭಾವನೆಗೆ ಧಕ್ಕೆ ಆರೋಪ-ಪತ್ರಕರ್ತೆ ವಿರುದ್ಧ ದೂರು

ರಾಮನ ಭಕ್ತರಿಗೆ ಅವಮಾನ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂಗ್ಲೀಷ್ ದಿನಪತ್ರಿಕೆಯ ವರದಿಗಾರ್ತಿ ಸ್ವಾತಿ ವಡ್ಲಮುಡಿ ಎಂಬುವವರ ವಿರುದ್ಧ ಹಿಂದೂ ಸಂಘಟನೆಯ ಅಧ್ಯಕ್ಷ ಹಾಗೂ ವಕೀಲರಾದ ಕೃಷ್ಣಮೂರ್ತಿ ಕರುಣಾ ಸಾಗರ ಎಂಬುವವರು ದೂರು ನೀಡಿದ್ದಾರೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪತ್ರಕರ್ತೆ ಸ್ವಾತಿ, ತಮ್ಮ ಫೇಸ್ ಬುಕ್ ವಾಲ್ ನಲ್ಲಿ ವ್ಯಂಗ್ಯ ಚಿತ್ರ ಬಿಡಿಸಿ ಪೋಸ್ಟ್ ಮಾಡಿದ್ದರು. ಈ ಕಾರ್ಟೂನ್ ನಲ್ಲಿ ಸೀತೆ ರಾಮನಿಗೆ, ಸಂತಸದ ಸಂಗತಿಯೆಂದರೆ ನಾನು ರಾವಣನಿಂದ ಅಪಹರಣಕ್ಕೊಳಗಾದೆನೇ ಹೊರತು ನಿಮ್ಮ ಭಕ್ತರಿಂದಲ್ಲ ಎನ್ನುತ್ತಾಳೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇಷ್ಟಲ್ಲದೇ, ಇಂಥದ್ದೇ ಕಾಮೆಂಟ್ ಹಾಕಿದ್ದ ಮತ್ತೋರ್ವ ಮಹಿಳೆ ಕೇರಳದ ಮಾಲತಿ ಎನ್ನುವವರ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...