alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ನಲ್ಲಿ ಶಾಂತಿ ಕದಡುವ ಪ್ಲಾನ್ ಹಾಕಿತ್ತು ಐಎಸ್ಐಎಸ್

mandir_650_063016080904

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ವೇಳೆ ರಕ್ತದೋಕುಳಿ ನಡೆಸಲು ಹೊಂಚು ಹಾಕಿದ್ದವರು ಸಿಕ್ಕಿಬಿದ್ದಿದ್ದಾರೆ. ಹೈದ್ರಾಬಾದ್ ನ 9 ಕಡೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ಐಎಸ್ ಐಎಸ್ ಜೊತೆ ಸಂಬಂಧ ಹೊಂದಿದ್ದ ಐದು ಮಂದಿಯನ್ನು ಬಂಧಿಸಿದೆ. ಮತ್ತೆ ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಐಎಸ್ಐಎಸ್ ಹೈದ್ರಾಬಾದ್ ನಲ್ಲಿ ಗಲಭೆಯೆಬ್ಬಿಸಲು ಹೊಂಚು ರೂಪಿಸಿತ್ತು ಎನ್ನಲಾಗಿದೆ. ಚಾರ್ ಮಿನಾರ್ ಬಳಿ ಇರುವ ದೇವಸ್ಥಾನದ ಬಳಿ ಗೋಮಾಂಸ ಇಡಲು ಪ್ಲಾನ್ ಮಾಡಿತ್ತಂತೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಸ್ಫೋಟ ನಡೆಸುವ ಯೋಜನೆ ಹಾಕಿದ್ದ ಸಂಘಟನೆ ಮುಖ್ಯ ಗುರಿ ಶಾಂತಿ ಕದಡುವುದು. ಹಾಗಾಗಿ ದೇವಸ್ಥಾನದ ಬಳಿ ಗೋಮಾಂಸವಿಡಲು ಐಎಸ್ಐಎಸ್ ನಿರ್ಧರಿಸಿತ್ತೆಂದು ಎನ್ಐಎ ತಿಳಿಸಿದೆ.

ಎನ್ಐಎ ಬಂಧಿತ 11 ಮಂದಿ ಯುವಕರಿಂದ ಶಕ್ತಿಶಾಲಿ ಬಾಂಬ್ ಹಾಗೂ 15 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. 25 ಮೊಬೈಲ್ ಫೋನ್, ಏರ್ ಗನ್, ಬಾಂಬ್ ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...