alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂ. ದೇಣಿಗೆ ಕೊಟ್ಟ ಉದ್ಯಮಿ

ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಹೈದರಾಬಾದ್ ಉದ್ಯಮಿಯೊಬ್ಬರು 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಮೀನಾಕ್ಷಿ ಇನ್ಫೋ ಪ್ರೈವೇಟ್ ಲಿ. ಚೇರ್ಮನ್ ಕೆ.ಎಸ್. ರಾವ್, 1 ಕೋಟಿಯ ಡಿಮಾಂಡ್ ಡ್ರಾಫ್ಟ್ ನೀಡಿರುವ ಬಗ್ಗೆ ಟಿಟಿಡಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ. ರವಿ ಮಾಹಿತಿ ನೀಡಿದ್ದಾರೆ.

ದೇಣಿಗೆ ನೀಡಲಾದ ಹಣವನ್ನು ದೇವಸ್ಥಾನದಲ್ಲಿ ನೀಡಲಾಗುವ ಉಚಿತ ಅನ್ನ ಸಂತರ್ಪಣೆಗೆ ಬಳಸಬೇಕೆಂದು ದಾನಿ ಕೇಳಿಕೊಂಡಿದ್ದಾರೆ. ತಿರುಪತಿ ದೇವಸ್ಥಾನದಲ್ಲಿ ದಿನಂಪ್ರತಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಊಟ ಮಾಡುತ್ತಾರೆ. ಇದ್ರಿಂದ ವರ್ಷಕ್ಕೆ 60 ಕೋಟಿ ರೂಪಾಯಿ ಖರ್ಚಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...