alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಸ್ಟ್ ಕಾರ್ಡ್ ನಲ್ಲಿ ತಲಾಕ್ ನೀಡಿದ್ದ ಭೂಪ ಕಂಬಿ ಹಿಂದೆ

3_talak_fir__1491294610_749x421

ತ್ರಿವಳಿ ತಲಾಕ್ ದೇಶದಲ್ಲಿ ಬಹು ಚರ್ಚೆಯ ವಿಷಯವಾಗಿದೆ. ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಈಗ ಬಹಿರಂಗವಾಗ್ತಾ ಇವೆ. ಹೈದ್ರಾಬಾದ್ ನಲ್ಲಿಯೂ ತ್ರಿವಳಿ ತಲಾಕ್ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೈದ್ರಾಬಾದ್ ನಲ್ಲಿ ನೆಲೆಸಿರುವ ಮುಸ್ಲಿಂ ಮಹಿಳೆ ಹೆಸರಿನಲ್ಲಿ ಪೋಸ್ಟ್ ಕಾರ್ಡ್ ಬಂದಿದೆ. ಅದನ್ನು ತೆಗೆದು ನೋಡಿದ ಮಹಿಳೆ ಕಂಗಾಲಾಗಿದ್ದಾಳೆ. ಅದ್ರಲ್ಲಿ ಮೂರು ಬಾರಿ ತಲಾಕ್ ಎಂದು ಬರೆದಿದ್ದ ಪತಿ, ನನಗೂ ನಿನಗೂ ಇನ್ನು ಸಂಬಂಧವಿಲ್ಲವೆಂದು ತಿಳಿಸಿದ್ದ. ಇದ್ರಿಂದ ಆಘಾತಗೊಂಡ ಮಹಿಳೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶ ಸಹರಾನ್ಪುರದಲ್ಲಿ ಗರ್ಭಿಣಿಯೊಬ್ಬಳು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ರಧಾನ ಮಂತ್ರಿ ಮೋದಿಗೂ ಪತ್ರ ಬರೆದಿದ್ದಾಳೆ. ಸುಪ್ರೀಂ ಕೋರ್ಟ್ ನಲ್ಲಿ ತ್ರಿವಳಿ ತಲಾಕ್ ವಿಚಾರಣೆ ಸದ್ಯದಲ್ಲಿಯೇ ಶುರುವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...