alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲುವಂತಿದೆ ಈ ‘ತಬರ’ನ ಹೃದಯ ವಿದ್ರಾವಕ ಕತೆ

telangana-tongue

ಹೈದರಾಬಾದ್: ನಿಮಗೆಲ್ಲಾ ತಬರನ ಕತೆ ನೆನಪಿರಬಹುದು. ಸೌಲಭ್ಯ ಪಡೆಯಲು ಸರ್ಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗುವ ತಬರನ ಕಷ್ಟಕ್ಕೆ ಕನಿಕರಪಟ್ಟಿರುತ್ತೀರಿ. ಅದೇ ಘಟನೆಯನ್ನು ನೆನಪಿಸುವಂತಹ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

ಜಡ್ಡುಗಟ್ಟಿದ ಸರ್ಕಾರಿ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿದೆ ಹೈದರಾಬಾದ್ ನಲ್ಲಿ ನಡೆದ ಈ ಘಟನೆ. ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗಿ ಹೋದ ಹಿರಿಯ ನಾಗರೀಕರೊಬ್ಬರು, ತಮ್ಮ ನಾಲಗೆಯನ್ನೇ ಕತ್ತರಿಸಿಕೊಂಡ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ತೆಲಂಗಾಣ ಸಚಿವಾಲಯದ ಎದುರು ನಡೆದಿದೆ. ಈ ವೃದ್ಧರು ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗೆ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.

ಆದರೆ, ಯಾರೂ ಅವರಿಗೆ ಸೌಲಭ್ಯ ಕೊಡಲಿಲ್ಲ. ಇದರಿಂದ ಕಚೇರಿಗೆ ಅಲೆದಾಡಿ ಸುಸ್ತಾದ ಅವರು, ಪಿಂಚಣಿ ಸಿಗದ ಹತಾಶೆಯಿಂದ ತಮ್ಮ ನಾಲಗೆಯನ್ನು ಬ್ಲೇಡ್ ನಿಂದ ಕೊಯ್ದುಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...