alex Certify
ಕನ್ನಡ ದುನಿಯಾ       Mobile App
       

Kannada Duniya

ಹಣದಾಸೆಗೆ ಪತ್ನಿಗೆ 2 ಬಾರಿ ವಿವಾಹ ಮಾಡಿಸಿದ ಭೂಪ

marriageಸರ್ಕಾರದ ಸವಲತ್ತುಗಳನ್ನು ಪಡೆಯಲು ಜನ ಹೇಗೆಲ್ಲಾ ಅಕ್ರಮ ಮಾರ್ಗ ತುಳಿಯುತ್ತಾರೆ ನೋಡಿ. 16 ವರ್ಷಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿಯೊಬ್ಬ ತೆಲಂಗಾಣ ಸರ್ಕಾರ ಜಾರಿಗೆ ತಂದಿರುವ ‘ಕಲ್ಯಾಣ ಲಕ್ಷ್ಮಿ’ ಯೋಜನೆಯ ಹಣ ಪಡೆಯಲು ತನ್ನ ಪತ್ನಿಗೆ ಕೇವಲ 20 ದಿನಗಳಲ್ಲಿ 2 ಬಾರಿ ವಿವಾಹವಾಗಿರುವಂತೆ ದಾಖಲೆ ಸೃಷ್ಟಿಸಿ 1 ಲಕ್ಷ ರೂ.ಗಳಿಗೂ ಅಧಿಕ ಹಣ ಪಡೆದು ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ನಲ್ಗೊಂಡಾ ಜಿಲ್ಲೆಯ ಪಾಲ್ತಿ ತಾಂಡಾದ ವೀರಸಿಂಗ್ ಎಂಬಾತ 16 ವರ್ಷಗಳ ಹಿಂದೆ ಧನು ಎಂಬಾಕೆಯೊಂದಿಗೆ ವಿವಾಹವಾಗಿದ್ದ. ‘ಕಲ್ಯಾಣ ಲಕ್ಷ್ಮಿ’ ಯೋಜನೆಯಡಿ ನೀಡಲಾಗುವ 51 ಸಾವಿರ ರೂ. ಹಣ ಪಡೆಯಲು ಈತ ಮೇ 25, 2015 ರಂದು ತನ್ನ ಪತ್ನಿ ಧನು, ರಾಮವತ್ ಸುರೇಶ್ ಎಂಬಾತನೊಂದಿಗೆ ವಿವಾಹವಾಗಿರುವಂತೆ ನಕಲಿ ದಾಖಲೆ ಸೃಷ್ಟಿಸಿ ಗ್ರಾಮೀಣ ವಿಕಾಸ ಬ್ಯಾಂಕ್ ನಿಂದ 51 ಸಾವಿರ ರೂ. ಡ್ರಾ ಮಾಡಿಕೊಂಡಿದ್ದ. ಬಳಿಕ ಜೂನ್ 14, 2015 ರಂದು ಧನು, ಬನ್ವತ್ ಸ್ವಾಮಿ ಎಂಬಾತನೊಂದಿಗೆ ವಿವಾಹವಾಗಿರುವುದಾಗಿ ದಾಖಲೆ ನೀಡಿ ಪುನಃ 51 ಸಾವಿರ ರೂ. ಪಡೆದುಕೊಂಡಿದ್ದ. ಆದರೆ ಇದರ ಬಗ್ಗೆ ಅನುಮಾನಗೊಂಡಿದ್ದ ಅಧಿಕಾರಿಗಳು ತನಿಖೆ ನಡೆಸಿದಾಗ ವಂಚನೆ ಬಯಲಾಗಿದ್ದು, ಆರೋಪಿಯನ್ನು ಈಗ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...