alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆ ನಡುಗಿಸುತ್ತೆ ಟೆಕ್ಕಿ ದಂಪತಿಗಳ ಬೈಕ್ ಅಪಘಾತದ ದೃಶ್ಯ

ಹೈದರಾಬಾದ್‌ ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಹಿಂದಿನಿಂದ ಲಾರಿ ಗುದ್ದಿದ ಪರಿಣಾಮ ಪತ್ನಿ ನೆಲಕ್ಕುರುಳಿ ಅಸುನೀಗಿದ್ದಾರೆ. ಪತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಲ್ಕೂರು ಬಾಲಾಜಿ ದೇಗುಲದಿಂದ ರಮ್ಯಾ-ಪ್ರವೀಣ್ ದಂಪತಿ ಗಚಿಬೌಲಿಯಲ್ಲಿರುವ ಮನೆಗೆ ಬೈಕ್‌ನಲ್ಲಿ ಮರಳುತ್ತಿದ್ದರು. ಲಾರಿ ಹಾಗೂ ಇವರಿದ್ದ ಬೈಕ್ ಸಮಾನಾಂತರವಾಗಿ ಹೋಗುತ್ತಿತ್ತು.

ಹೈದರಾಬಾದ್ ನಗರದ ಐಸಿಐಸಿಐ ಲೊಂಬಾರ್ಡ್ ಜಂಕ್ಷನ್‌ ಬಳಿ ತಿರುವಿನಲ್ಲಿ ಲಾರಿ ತುಸು ಎಡಕ್ಕೆ ಬಂದಾಗ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಆ ರಭಸಕ್ಕೆ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ರಮ್ಯಾ ನೆಲಕ್ಕೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ.

ರಮ್ಯಾ ಅವರು ಸ್ಥಳದಲ್ಲೇ ಮೃತಪಟ್ಟರು. ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. ದಂಪತಿಯಿಬ್ಬರೂ ಸಾಫ್ಟ್ ವೇರ್ ಇಂಜಿನಿಯರ್‌ಗಳಾಗಿದ್ದು ಎಂಎನ್‌ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಿಸಿ ಟಿವಿಯಲ್ಲಿ ಈ ಅಪಘಾತದ ಭೀಕರ ದೃಶ್ಯ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...