alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಸಲುವಾಗಿ ನಡೆದಿತ್ತಲ್ಲಿ ಬರ್ಬರ ಕೊಲೆ

rupesh kumarಪ್ರೀತಿಸಿ ಮದುವೆಯಾಗಿದ್ದ ಪತ್ನಿ ಈಗ ಮತ್ತೊಬ್ಬನ ಪ್ರೇಮಪಾಶಕ್ಕೆ ಸಿಲುಕಿದ್ದಲ್ಲದೇ ಆತನನ್ನು ವಿವಾಹವಾಗಲು ವಿಚ್ಚೇದನ ಕೋರಿದ್ದು, ಜೊತೆಗೆ ತಮ್ಮ 5 ವರ್ಷದ ಮಗಳನ್ನೂ ಕರೆದುಕೊಂಡು ಹೋಗಲು ಮುಂದಾದಾಗ ರೊಚ್ಚಿಗೆದ್ದ ಪತಿ, ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಹಾಕಲು ಯತ್ನಿಸಿದ ಘಟನೆ ನಡೆದಿದೆ.

ಹೈದರಾಬಾದಿನ ರೂಪೇಶ್ ಕುಮಾರ್ ಎಂಬಾತ ಅಫ್ರಿಕಾ ಮೂಲದ ಸಿಂತಿಯಾಳನ್ನು ಕಾಂಗೋದಲ್ಲಿ ಭೇಟಿಯಾಗಿದ್ದು, 2006 ರಲ್ಲಿ ಇವರಿಬ್ಬರು ವಿವಾಹವಾಗಿದ್ದರು. ವಿವಾಹವಾದ ಬಳಿಕ ಹೈದರಾಬಾದಿನಲ್ಲಿ ನೆಲೆಸಿದ್ದ ದಂಪತಿಗಳಿಗೆ ಒಂದು ಹೆಣ್ಣು ಮಗುವೂ ಆಗಿತ್ತು.

ಈ ಮಧ್ಯೆ ಸಿಂತಿಯಾಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫ್ರೆಂಚ್ ವ್ಯಕ್ತಿಯೊಬ್ಬನ ಪರಿಚಯವಾಗಿದ್ದು, ಆತನೊಂದಿಗೆ ವಿವಾಹವಾಗಲು ಬಯಸಿದ ಸಿಂತಿಯಾ, ಪತಿ ರೂಪೇಶ್ ಕುಮಾರ್ ನಿಂದ ವಿಚ್ಚೇದನ ಕೇಳಿದ್ದಾಳೆ. ಇದಕ್ಕೆ ಆತ ಸಮ್ಮತಿಸಿದ್ದು ಆದರೆ ಸಿಂತಿಯಾ ತನ್ನ ಜೊತೆಗೆ ಮಗಳನ್ನೂ ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಆಕ್ರೋಶಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾನೆ.

ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಶಂಶಾಬಾದ್ ಸಮೀಪದ ಮದನಪಲ್ಲಿ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಸೂಟ್ ಕೇಸ್ ಗೆ ಬೆಂಕಿ ಹಚ್ಚಿದ್ದಾನೆ. ವಾಪಾಸ್ ಹೈದರಾಬಾದ್ ಗೆ ತೆರಳುತ್ತಿದ್ದ ವೇಳೆ ಕೆಸರಿನಲ್ಲಿ ಆತನ ಕಾರು ಸಿಕ್ಕಿ ಹಾಕಿಕೊಂಡಿದ್ದು, ಕಾರನ್ನು ದೂಡಲು ಬಂದ ಕೆಲ ಯುವಕರಿಗೆ ಕಾರಿನ ಮೇಲೆ ರಕ್ತದ ಕಲೆ ಇರುವುದು ಕಂಡು ಬಂದಿದೆ. ರೂಪೇಶ್ ಕುಮಾರ್ ನನ್ನು ಹಿಡಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಬಂದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಇದೀಗ ರೂಪೇಶ್ ಕುಮಾರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...