alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಆವರಣದಲ್ಲಿಯೇ ನಡೀತು ದುರಂತ

Jashwanth reddyತಮ್ಮ ಆರು ವರ್ಷದ ಮಗನನ್ನು ಆ ತಂದೆ ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸಹ ವಾಹನದಲ್ಲಿ ಕರೆ ತಂದು ಶಾಲೆ ಗೇಟಿನ ಬಳಿ ಬಿಟ್ಟು ಟಾಟಾ ಮಾಡಿ ಸ್ವಲ್ಪ ದೂರ ಹೋಗಿದ್ದರಷ್ಟೆ. ಯಮದೂತನಂತೆ ಬಂದ ಅದೇ ಶಾಲೆಯ ಬಸ್ ಕಣ್ಮುಚ್ಚಿ ಬಿಡುವಷ್ಟರಲ್ಲೇ ಆ ಮಗುವಿನ ಪ್ರಾಣ ತೆಗೆದಿದೆ.

ಇಂತದೊಂದು ದುರಂತ ಘಟನೆ ಹೈದರಾಬಾದಿನ ವಿಜ್ಞಾನ್ ಸುಧಾ ಟ್ಯಾಲೆಂಟ್ ಸ್ಕೂಲ್ ನಲ್ಲಿ ನಡೆದಿದೆ. ರಾಮ ರೆಡ್ಡಿ ಎಂಬವರು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಆರು ವರ್ಷದ ಮಗ ಜಶ್ವಂತ್ ರೆಡ್ಡಿಯನ್ನು 8-30 ರ ಸುಮಾರಿಗೆ ಶಾಲೆ ಬಳಿ ಕರೆ ತಂದು ಬಿಟ್ಟಿದ್ದಾರೆ. ಮಗು ನಡೆದುಕೊಂಡು ಒಳ ಹೋಗುವಾಗ ಹಿಂದಿನಿಂದ ಬಂದ ಶಾಲೆಯ ಬಸ್ ಮಗುವಿಗೆ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ಜಶ್ವಂತ್ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತನ ಪ್ರಾಣಿ ಪಕ್ಷಿ ಹಾರಿ ಹೋಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗುತ್ತಿದೆ. ಬಸ್ ಚಾಲಕ, ಶಾಲಾ ಗೇಟ್ ಒಳಗೆ ಬಂದ ವೇಳೆ ಮುಂದೆ ನಡೆದು ಹೋಗುತ್ತಿದ್ದ ಮಗುವನ್ನು ಗಮನಿಸದೆ ಅಪಘಾತವೆಸಗಿ ದುರಂತಕ್ಕೆ ಕಾರಣವಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...