alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಗೆ ಹಣ ತುಂಬಬೇಕಾದವರು ಮಾಡಿದ್ರು ಆ ಕೆಲ್ಸ

money 2390ವಿವಿಧ ಬ್ಯಾಂಕುಗಳ ಎಟಿಎಂ ಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಸಂಸ್ಥೆಯ ನೌಕರರಿಬ್ಬರು ವಂಚನೆಯೆಸಗಿದ್ದಾರೆ. ಸುಮಾರು 9.98 ಕೋಟಿ ರೂ. ಗಳನ್ನು ಎಟಿಎಂ ಯಂತ್ರಕ್ಕೆ ತುಂಬಿರುವುದಾಗಿ ಸುಳ್ಳು ಹೇಳಿದ್ದು, ಪರಿಶೀಲನೆ ವೇಳೆ ಸತ್ಯ ಬೆಳಕಿಗೆ ಬಂದಿದೆ.

ಹೈದರಾಬಾದಿನ ಕೊಂಪಲ್ಲಿಯಲ್ಲಿರುವ ಆರ್.ಸಿ.ಐ ಕ್ಯಾಶ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಲಿಮಿಟೆಡ್ ಕಂಪನಿ ನೌಕರರಾದ ಲೋಕೇಶ್ವರ್ ರೆಡ್ಡಿ ಹಾಗೂ ಪ್ರವೀಣ್ ಕುಮಾರ್ ಶುಕ್ರವಾರದಂದು ಬ್ಯಾಂಕುಗಳಿಂದ ಹಣ ಪಡೆದು ಹೈದರಾಬಾದ್ ಹಾಗೂ ಸಿಕಂದರಬಾದ್ ನಲ್ಲಿರುವ ಎಟಿಎಂ ಗಳಿಗೆ ಹಣ ತುಂಬಿಸಲು ಹೊರಟಿದ್ದಾರೆ.

ಆದರೆ ತಾವು ಸಂಗ್ರಹಿಸಿದ್ದ 9.98 ಕೋಟಿ ರೂ. ಗಳನ್ನು ಎಟಿಎಂ ಗಳಿಗೆ ತುಂಬಿಸದೆ ತಮ್ಮ ಸಂಸ್ಥೆಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾದ ಕೆಲ ಹೊತ್ತಿನಲ್ಲೇ ಇಬ್ಬರ ಮೊಬೈಲ್ ಫೋನ್ ಗಳು ಸ್ವಿಚ್ಚಾಫ್ ಆಗಿವೆ. ಇದರಿಂದ ಆತಂಕಗೊಂಡ ಸಂಸ್ಥೆಯವರು ಪರಿಶೀಲನೆ ನಡೆಸಿದಾಗ ಯಾವುದೇ ಎಟಿಎಂ ಗಳಿಗೆ ಇವರುಗಳು ಹಣ ತುಂಬಿಸದಿರುವುದು ಪತ್ತೆಯಾಗಿದೆ. ಈ ಕುರಿತು ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...