alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಆಸ್ಪತ್ರೆಯಲ್ಲಿ ಐವರು ಗರ್ಭಿಣಿಯರ ಸಾವು

die

ಹೈದ್ರಾಬಾದ್ ನ ನಿಲೋಫರ್ ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ ಐವರು ತುಂಬು ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಹೆರಿಗೆ ಸಂದರ್ಭದಲ್ಲೇ ಎಲ್ಲರೂ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಎಲ್ಲಾ ಗರ್ಭಿಣಿಯರಿಗೂ ಸಿ-ಸೆಕ್ಷನ್ ಹೆರಿಗೆ ಮಾಡಲಾಗಿತ್ತು, ಬಳಿಕ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.

ಜನವರಿ 28ರಿಂದ ಫೆಬ್ರವರಿ 4ರವರೆಗೆ ಐವರು ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಆಪರೇಶನ್ ಥಿಯೇಟರ್ ನ ಸ್ವಚ್ಛತೆ, ಔಷಧಗಳ ಗುಣಮಟ್ಟ ಎಲ್ಲದರ ಬಗೆಗೂ ತನಿಖೆ ನಡೆಸುವಂತೆ ಆರೋಗ್ಯ ಸಚಿವರು ಆದೇಶಿಸಿದ್ದಾರೆ. ತನಿಖೆಗೆ ಮೂವರು ಸದಸ್ಯರ ಸಮಿತಿ ನೇಮಕ ಮಾಡಲಾಗಿದೆ.

ಮೃತ ಗರ್ಭಿಣಿಯರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಳೆದ ವರ್ಷ ಇದೇ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಿಸೇರಿಯನ್ ಮಾಡಿದ್ದ ವೈದ್ಯರು, ಬಟ್ಟೆಯ ತುಂಡೊಂದನ್ನು ಹೊಟ್ಟೆಯಲ್ಲೇ ಇಟ್ಟು ಹೊಲಿಗೆ ಹಾಕಿಬಿಟ್ಟಿದ್ದರು. ಆಕೆ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿತ್ತು, ಬಳಿಕ ಅವಳನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರ ಯಡವಟ್ಟು ಬೆಳಕಿಗೆ ಬಂದಿದೆ. ಈಗಲೂ ಇಂಥದ್ದೇ ಪ್ರಮಾದಗಳಿಂದ ಗರ್ಭಿಣಿಯರ ಸಾವು ಸಂಭವಿಸಿರಬಹುದು ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...