alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಪುಟ್ಟ ಬಾಲಕನ ದುರಂತ ಸಾವು

hyderbad-boy-34766ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಬಲು ಕಷ್ಟದ ಕೆಲಸ. ಅರಿಯದ ಮಕ್ಕಳು ಅನಾಹುತ ಮಾಡಿಕೊಂಡರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಪೋಷಕರಿಗಿರುವುದಿಲ್ಲ. ಹೀಗೆ ಪುಟ್ಟ ಬಾಲಕನೊಬ್ಬ ಅರಿಯದೆ ಮಾಡಿಕೊಂಡ ಅನಾಹುತಕ್ಕೆ ಇಡೀ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಬುಧವಾರದಂದು ಹೈದರಾಬಾದಿನ ನಿಜಾಂ ಪೇಟ್ ನಲ್ಲಿರುವ ಕುಕ್ಕುಟಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶ್ರೇಯಸ್ ಎಂಬ ನಾಲ್ಕು ವರ್ಷದ ಬಾಲಕ, ಪ್ಲಾಸ್ಟಿಕ್ ಕವರ್ ಅನ್ನು ತನ್ನ ತಲೆಗೆ ಹಾಕಿಕೊಂಡ ವೇಳೆ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ.

ಸೇಬು ತಂದಿದ್ದ ಪ್ಲಾಸ್ಟಿಕ್ ಕವರ್ ಅನ್ನು ಶ್ರೇಯಸ್ ತನ್ನ ತಲೆಗೆ ಹಾಕಿಕೊಂಡಾಗ ಅದನ್ನು ಗಮನಿಸಿದ ತಾಯಿ ದಿವ್ಯಾ, ಹಾಗೇ ಮಾಡದಂತೆ ಹೇಳಿ ಅಡುಗೆ ಮನೆಗೆ ತೆರಳಿದ್ದಾರೆ. ಆದರೂ ಬಾಲಕ, ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಪ್ಲಾಸ್ಟಿಕ್ ಕವರ್ ಅನ್ನು ತನ್ನ ತಲೆಗೆ ಹಾಕಿಕೊಂಡಿದ್ದಾನೆ. ಈ ವೇಳೆ ಉಸಿರು ಕಟ್ಟಿದಂತಾದ ಆತ ತನ್ನ ತಾಯಿ ದಿವ್ಯಾ ಅವರನ್ನು ಕೂಗಿ ಕರೆದಿದ್ದಾನೆ. ಗಾಬರಿಯಿಂದ ಓಡೋಡಿ ಬಂದ ತಾಯಿ ದಿವ್ಯಾ, ಮಗ ಬೆಡ್ ರೂಮ್ ಬಾಗಿಲು ಹಾಕಿಕೊಂಡಿದ್ದ ಕಾರಣ ಕಂಗಾಲಾಗಿದ್ದು, ಬಳಿಕ ಅಕ್ಕಪಕ್ಕದ ನಿವಾಸಿಗಳನ್ನು ಸಹಾಯಕ್ಕೆ ಕರೆದಿದ್ದಾರೆ. ಅವರುಗಳು ಧಾವಿಸಿ ಬಂದು ಬೆಡ್ ರೂಮ್ ಬಾಗಿಲು ಹೊಡೆದು ನೋಡಿದಾಗ ಬಾಲಕ ಶ್ರೇಯಸ್ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ. ಬಾಲಕನ ಈ ಸಾವಿಗೆ ಕುಟುಂಬ ಮಾತ್ರವಲ್ಲದೇ ಅಪಾರ್ಟ್ಮೆಂಟ್ ನಿವಾಸಿಗಳೂ ಈಗ ಕಣ್ಣೀರು ಮಿಡಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...