alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೂ ಮುನ್ನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಾಡಿದ್ದೇನು?

ಹೈದ್ರಾಬಾದ್ ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಖುಷಿಯಾಗಿರಲು ಭಯವಾಗುತ್ತಿದೆ ಅಂತಾ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾಳೆ. ಬಿಟೆಕ್ ಫೈನಲ್ ಇಯರ್ ಓದ್ತಾ ಇದ್ದ ಸಿ.ಮೌನಿಕಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ತಾಯಿಯಿಂದ ಬೈಗುಳ ತಿಂದಿದ್ದಕ್ಕೆ ನೊಂದು ಈ ನಿರ್ಧಾರಕ್ಕೆ ಬಂದಿದ್ದಳು ಅಂತಾ ಹೇಳಲಾಗ್ತಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮೌನಿಕಾ ನೇಣಿಗೆ ಶರಣಾಗಿದ್ದಾಳೆ. ಮತ್ತೊಂದು ಪ್ರಕರಣದಲ್ಲಿ ಹೈದ್ರಾಬಾದ್ ನಲ್ಲೇ ಇನ್ನೋರ್ವ ವ್ಯಕ್ತಿ ಆತ್ಮಹತ್ಯೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.

ಶಾಹೆದ್ ಹುಸೇನ್ ಎಂಬಾತ, ಹಣಕ್ಕಾಗಿ ಸಂಬಂಧಿಕರು ಕೊಡುತ್ತಿರುವ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ವಿಡಿಯೋದಲ್ಲಿ ತಿಳಿಸಿದ್ದಾನೆ. ಪಕ್ಕದಲ್ಲೇ ಸುಸೈಡ್ ನೋಟ್ ಒಂದನ್ನು ಕೂಡ ಬರೆದಿಟ್ಟಿದ್ದಾನೆ. ಅದರಲ್ಲಿ ತನಗೆ ತೊಂದರೆ ಕೊಡ್ತಾ ಇದ್ದ ಐವರ ಹೆಸರನ್ನೂ ಉಲ್ಲೇಖಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...