alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಕನಿಯಿಂದ ಬಿದ್ದ ಮಗುವಿನ ಸ್ಥಿತಿ ಗಂಭೀರ

baby

ಹೈದ್ರಾಬಾದ್ ನ ಬಹಾದುರ್ಪುರದಲ್ಲಿ ಮನೆಯ ಬಾಲ್ಕನಿಯಿಂದ ಬಿದ್ದ 2 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ. ಇನಾಯಾ ಫಾತಿಮಾ ಎಂಬ 2 ವರ್ಷದ ಹೆಣ್ಣು ಮಗು ಮನೆಯ ಮೊದಲ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿತ್ತು. ಇದ್ದಕ್ಕಿದ್ದಂತೆ ಕಾಲು ಜಾರಿ ಕೆಳಕ್ಕೆ ಬಿದ್ದಿದೆ.

ಮಗು ಚೀರಿಕೊಂಡ ಸದ್ದು ಕೇಳಿ ಹೆತ್ತವರು ಓಡಿಬಂದ್ರು. ಮೇಲಿನಿಂದ ಬಿದ್ದ ರಭಸಕ್ಕೆ ತಲೆಗೆ ಗಾಯವಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಮಗು ಬಾಲ್ಕನಿಯಿಂದ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರು ಕೂಡ ಘಟನೆ ಬಗ್ಗೆ ತನಿಖೆ ನಡೆಸಿದ್ದು, ಮಗು ಆಕಸ್ಮಿಕವಾಗಿ ಬಿದ್ದಿದೆ ಅಂತಾ ಸ್ಪಷ್ಟಪಡಿಸಿದ್ದಾರೆ. ಮಧ್ಯಾಹ್ನ ಮಗು ಬಿದ್ದ ಸಮಯದಲ್ಲಿ ಪೋಷಕರು ನಿದ್ದೆ ಮಾಡುತ್ತಿದ್ರು ಎನ್ನಲಾಗಿದೆ. ಮಕ್ಕಳ ಹಕ್ಕುಗಳ ಸಂಘಟನೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ. ಹೆತ್ತವರ ನಿರ್ಲಕ್ಷ್ಯದಿಂದ್ಲೇ ಅನಾಹುತ ಸಂಭವಿಸಿದೆ ಅಂತಾ ಆರೋಪಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...