alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಈ ಘಟನೆ…! ಸ್ಮಾರ್ಟ್ ಫೋನ್ ಗಾಗಿ ನಡೆದಿದೆ ಸ್ನೇಹಿತನ ಹತ್ಯೆ

ಸ್ಮಾರ್ಟ್ ಫೋನ್ ಮೇಲಿನ ಆಸೆಯಿಂದಾಗಿ ಸ್ನೇಹಿತನನ್ನೇ ಬೆಂಕಿ ಇಟ್ಟು ಕೊಂದಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 19ವರ್ಷದ ಗದ್ದಾಮ್ ಪ್ರೇಮ್ ಸಾಗರ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಢಗೆ ಪ್ರೇಮ್ ಎಂಬಾತನೇ ಪ್ರಾಣ ಕಳೆದುಕೊಂಡ 17 ವರ್ಷದ ಯುವಕ.

ಅಕ್ಕಪಕ್ಕದ ಮನೆಯವರಾಗಿದ್ದ ಇಬ್ಬರು ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಪಿಯುಸಿಯನ್ನ ಅರ್ಧದಲ್ಲೇ ನಿಲ್ಲಿಸಿಬಿಟ್ಟಿದ್ದ ಸಾಗರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ಲಾಂಗ್ ಡ್ರೈವ್ ನೆಪದಲ್ಲಿ ಪ್ರೇಮ್ ನನ್ನು ಕರೆದೊಯ್ದ ಸಾಗರ್ ಮಾರ್ಗಮಧ್ಯೆ ಎರಡು ಸಾಫ್ಟ್ ಡ್ರಿಂಕ್ ಬಾಟಲ್ ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡ. ಆನಂತರದಲ್ಲಿ ನಿರ್ಜನ ಪ್ರದೇಶಕ್ಕೆ ಪ್ರೇಮ್ ನನ್ನು ಕರೆದೊಯ್ದ ಸಾಗರ್ ಆತನನನ್ನ ಬಡಿಗೆಯಿಂದ ಪ್ರಜ್ಞೆ ತಪ್ಪುವವರೆಗೂ ಬಡಿದಿದ್ದಾನೆ. ಪ್ರಜ್ಞೆ ತಪ್ಪಿದವನ ಸ್ಮಾರ್ಟ್ ಫೋನ್ ತೆಗೆದುಕೊಂಡವನು, ಅವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಾಪಸ್ಸಾಗಿ ಅವನ ನಿತ್ಯ ಕೆಲಸಗಳಲ್ಲಿ ತೊಡಗಿದ್ದ.

ಮಗ ತಡರಾತ್ರಿಯಾದ್ರು ಮನೆಗೆ ಬರದಿರೋದನ್ನ ತಿಳಿದು ಗಾಬರಿಯಾದ ತಂದೆ ಸಾಗರ್ ನನ್ನ ವಿಚಾರಿಸಿದ್ದರು. ಆತ ತನೆಗೇನು ಗೊತ್ತಿಲ್ಲ ಎಂದು ಹೇಳಿದ್ದ. ಆದ್ರೆ ಸಾಗರ್ ಬೈಕ್ನಲ್ಲಿ ಪ್ರೇಮ್ ತೆರಳಿದ್ದನ್ನು ಕೆಲವರು ನೋಡಿದ್ದರು. ಆನಂತರದಲ್ಲಿ ಪ್ರೇಮ್ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಗರ್ ನನ್ನು ವಿಚಾರಣೆ ನಡೆಸಿದ ಪೊಲೀಸರು ಪ್ರಕರಣವನ್ನ ಬೇಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...