alex Certify
ಕನ್ನಡ ದುನಿಯಾ       Mobile App
       

Kannada Duniya

65 ವರ್ಷದ ವೃದ್ಧನನ್ನು ಮದುವೆಯಾಗಿದ್ದಾಳೆ 16 ವರ್ಷದ ಬಾಲೆ

hyderabad-teen_647_081717111043

ಹೈದ್ರಾಬಾದ್ ನ 16 ವರ್ಷದ ಬಾಲಕಿಯೊಬ್ಳು 65 ವರ್ಷದ ಓಮನ್ ವೃದ್ಧನನ್ನು ಮದುವೆಯಾಗಿದ್ದಾಳೆ. ಬಾಲಕಿಯನ್ನು ಮಸ್ಕಟ್ ನಿಂದ ಭಾರತಕ್ಕೆ ಕರೆತರುವಂತೆ ಕೋರಿ ಆಕೆಯ ತಾಯಿ ಸಯೀದಾ ಉನ್ನೀಸಾ ದೂರು ನೀಡಿದ್ದಾಳೆ. ತನ್ನ ಮಗಳು 65 ವರ್ಷದ ಅಹ್ಮದ್ ಶೇಖ್ ನನ್ನು ಮದುವೆಯಾಗಲು, ಪತಿಯ ಸಹೋದರಿ ಕಾರಣ ಅಂತಾ ಆರೋಪಿಸಿದ್ದಾಳೆ.

ರಮ್ಜಾನ್ ಗೂ ಮುನ್ನ ಗೌಸಿಯಾ ಮತ್ತಾಕೆಯ ಪತಿ ಹೈದ್ರಾಬಾದ್ ಗೆ ಬಂದಿದ್ರು. ಬಾಲಕಿಯನ್ನು ಅಹ್ಮದ್ ಶೇಖ್ ಗೆ ಮದುವೆ ಮಾಡಿಕೊಡುವಂತೆ ಪ್ರಸ್ತಾಪ ಇಟ್ಟಿದ್ರು. ಆದ್ರೆ ಅದಕ್ಕೆ ಸಯೀದಾ ಉನ್ನೀಸಾ ಒಪ್ಪಿರಲಿಲ್ಲ. ಆದ್ರೆ ಸಿಖಂದರ್ ಗುಟ್ಟಾಗಿ ಹೋಟೆಲ್ ಒಂದರಲ್ಲಿ ವೃದ್ಧನ ಜೊತೆ ಬಾಲಕಿಯ ಮದುವೆ ಮಾಡಿದ್ದಾನಂತೆ.

ತಾನು ಬಾಲಕಿಗಾಗಿ ಸಿಕಂದರ್ ಗೆ 5 ಲಕ್ಷ ಕೊಟ್ಟಿದ್ದೇನೆ ಅಂತಾ ಅಹ್ಮದ್ ಶೇಖ್ ಹೇಳಿಕೊಳ್ತಿದ್ದಾನೆ. 5 ಲಕ್ಷ ವಾಪಸ್ ಕೊಟ್ರೆ ಬಾಲಕಿಯನ್ನು ಭಾರತಕ್ಕೆ ಕಳಿಸಿಕೊಡೋದಾಗಿ ಹೇಳ್ತಿದ್ದಾನೆ. ಅಹ್ಮದ್ ಬಳಿಯಿದ್ದ ಹಣ ಹಾಗೂ ಐಷಾರಾಮಿ ವಸ್ತುಗಳನ್ನು ನೋಡಿ ಬಾಲಕಿ ಮರುಳಾಗಿದ್ದಾಳೆ ಎನ್ನಲಾಗ್ತಿದೆ.

ಮದುವೆ ನಂತರ ನಾಲ್ಕು ದಿನ ಹೋಟೆಲ್ ನಲ್ಲಿ ಉಳಿದಿದ್ದ ಅಹ್ಮದ್ ನಂತರ ಅವಳನ್ನು ಕರೆದುಕೊಂಡು ಓಮನ್ ಗೆ ತೆರಳಿದ್ದಾನೆ. ಬಾಲಕಿಗೆ ಸಿಕಂದರ್ ಪಾಸ್ಪೋರ್ಟ್ ವ್ಯವಸ್ಥೆ ಮಾಡಿಸಿದ್ದಾನಂತೆ. ಸದ್ಯ ಫಲಕ್ನುಮಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...