alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಪತ್ನಿ ಹೊಂದಿದವರಿಗೆ ಶುರುವಾಯ್ತು ಪೀಕಲಾಟ

marriag a7 mn

ನವದೆಹಲಿ: ಒಬ್ಬರನ್ನು ಮದುವೆಯಾಗಿ ಸಂಸಾರ ನಡೆಸುವುದೇ ಸವಾಲಿನ ಕೆಲಸ. ಅಂತಹುದರಲ್ಲಿ ಹೆಚ್ಚು ಪತಿ, ಪತ್ನಿಯರನ್ನು ಹೊಂದಿದವರ ಪಾಡೇನು ಎಂಬುದನ್ನು ನೋಡಿರುತ್ತೀರಿ. ಹಾಗೇ ಒಂದಕ್ಕಿಂತ ಹೆಚ್ಚು ಪತಿ, ಪತ್ನಿಯರನ್ನು ಹೊಂದಿದವರಿಗೆ ಹೊಸ ಪೀಕಲಾಟ ಶುರುವಾಗಿದೆ.

ಇತ್ತೀಚೆಗಷ್ಟೆ ಖಾದಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಹೇಳಿದ್ದ ಕೇಂದ್ರ ಸರ್ಕಾರ, ಹೊಸತೊಂದು ನಿಯಮ ಜಾರಿಗೆ ತಂದಿದೆ. ಇನ್ನುಮುಂದೆ, ಕೇಂದ್ರ ಸರ್ಕಾರಿ ನೌಕರರು, ಒಂದಕ್ಕಿಂತ ಹೆಚ್ಚು ಪತ್ನಿ ಅಥವಾ ಪತಿಯಂದಿರನ್ನು ಹೊಂದಿದ್ದಲ್ಲಿ ತಮ್ಮ ಸೇವಾ ಪುಸ್ತಕದಲ್ಲಿ ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೌಕರರ ಸೇವಾ ದಾಖಲೆಯನ್ನು ಬಳಕೆ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರಿ ನೌಕರರು, ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಇಲ್ಲವೇ ಪತಿಯರನ್ನು ಹೊಂದಿದಲ್ಲಿ ಘೋಷಣೆ ಮಾಡಬೇಕೆಂದು ತಿಳಿಸಲಾಗಿದೆ. ಈ ಮೊದಲು ಸರ್ಕಾರ ಕೇಳಿದರಷ್ಟೇ, ತಮ್ಮ ಮದುವೆಯ ಮಾಹಿತಿಯನ್ನು ನೌಕರರು ನೀಡಬೇಕಿತ್ತು. ಈಗ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...