alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ..!

default

ಉತ್ತರ ಪ್ರದೇಶದ ಆಲಿಗಢದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಮಹಿಳೆ ದೂರು ನೀಡ್ತಾ ಇದ್ದಂತೆ ಎಸ್ ಎಸ್ಪಿ ಕೂಡ ಆಶ್ಚರ್ಯಗೊಂಡಿದ್ದಾರೆ. ಕೇವಲ ಕಲ್ಲಂಗಡಿ ಹಣ್ಣು ತಿನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ ಪತಿ.

ರಮಾವತಿ ಮದುವೆ ಗನೇಂದ್ರ ಸಿಂಗ್ ಚೌಹಾಣ್ ಜೊತೆ 22 ವರ್ಷಗಳ ಹಿಂದಾಗಿದೆ. ರಮಾವತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರನ್ನು ಮದುವೆ ಮಾಡಿಕೊಡಲಾಗಿದೆ. ಕಲ್ಲಂಗಡಿ ಹಣ್ಣು ಖರೀದಿಸಿ ತಂದ ರಮಾದೇವಿ ಮನೆಯೊಳಗೆ ಹಣ್ಣು ತಿನ್ನಲು ಶುರುಮಾಡಿದ್ದಾಳೆ. ಮನೆಯಿಂದ ಹೊರಗೆ ಹೋಗಿ ತಿನ್ನುವಂತೆ ಗನೇಂದ್ರ ಪತ್ನಿಗೆ ಹೇಳಿದ್ದಾನೆ. ಇದಕ್ಕೆ ಪತ್ನಿ ಒಪ್ಪಲಿಲ್ಲ. ಇದೇ ಕಾರಣ ಇಟ್ಟುಕೊಂಡು ಗಲಾಟೆ ನಡೆಸಿದ ಪತಿ ಮನೆಯಿಂದ ಹೊರಹಾಕಿದ್ದಾನಂತೆ.

ಸ್ಥಳೀಯ ಪೊಲೀಸರಿಗೆ ರಮಾವತಿ ದೂರು ನೀಡಲು ಮುಂದಾಗಿದ್ದಾಳೆ. ಆದ್ರೆ ಕಾರಣ ಕೇಳಿದ ಪೊಲೀಸರು ರಮಾವತಿ ಸಮಸ್ಯೆಗೆ ಸ್ಪಂದಿಸಲಿಲ್ಲ. ಹಾಗಾಗಿ ರಮಾವತಿ ಎಸ್ ಎಸ್ಪಿ ಮೊರೆ ಹೋಗಿದ್ದಾಳೆ. ಸಮಸ್ಯೆ ಕೇಳಿದ ಎಸ್ ಎಸ್ಪಿ, ರಮಾವತಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...