alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇಯದೂ ಹೆಣ್ಣಾಗಿದ್ದಕ್ಕೆ ಇಂತ ಶಿಕ್ಷೆ

cg_mother_child_1486817778_749x421

ಛತ್ತೀಸ್ಗಡದ ಬಲೋದಬಜಾರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಎರಡೂ ಹೆಣ್ಣು ಎಂಬ ಕಾರಣಕ್ಕೆ ಕರುಣೆಯಿಲ್ಲದ ಪತಿಯೊಬ್ಬ ನವಜಾತ ಶಿಶುವೊಂದಿಗೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟ ಪತ್ನಿ ಬೀದಿಯಲ್ಲಿ ದಿನದೂಡಿದ್ದಾಳೆ. 10 ದಿನದ ಶಿಶುವನ್ನು ರಕ್ಷಿಸಿಕೊಳ್ಳಲು ಮಗುವನ್ನು  ಗೋಣಿ ಚೀಲದಲ್ಲಿ ತುಂಬಿದ್ದಾಳೆ ಮಹಿಳೆ.

ಘಟನೆ ಬಲೋದಬಜಾರ್ ನಿಂದ 10 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ. ಚಂದರಾಮ್ ಎಂಬಾತನ ಮದುವೆ ಐದು ವರ್ಷಗಳ ಹಿಂದೆ ರಾಗಿಣಿ ಜೊತೆಯಾಗಿತ್ತು. ಕುಡಿದು ಬರ್ತಾ ಇದ್ದ ಚಂದರಾಮ್ ರಾಗಿಣಿಗೆ ಹೊಡೆಯುತ್ತಿದ್ದನಂತೆ. ಹೆಣ್ಣು ಮಗು ಹುಟ್ಟಿದ ನಂತ್ರ ಆತನ ಹಿಂಸೆ ಜಾಸ್ತಿಯಾಗಿದೆ. ಎರಡನೇಯದು ಹೆಣ್ಣಾಗ್ತಾ ಇದ್ದಂತೆ ಕೋಪಗೊಂಡ ಚಂದರಾಮ್, ರಾಗಿಣಿಯನ್ನು ಹೊರಹಾಕಿದ್ದಾನೆ.

ರಾತ್ರಿಯಿಡಿ ಚಳಿಯಲ್ಲಿ ಕಳೆದ ರಾಗಿಣಿ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಹೊರಟಿದ್ದಾಳೆ. ಅಲ್ಲಿ ಆಕೆ ಸ್ಥಿತಿ ತಿಳಿದ ಸಾರ್ವಜನಿಕರ್ಯಾರೋ ಪೊಲೀಸರಿಗೆ ತಿಳಿಸಿದ್ದಾರೆ. ಚಂದರಾಮ್ ನನ್ನು ವಶಕ್ಕೆ ಪಡೆದು ಬುದ್ದಿವಾದ ಹೇಳಿದ ಪೊಲೀಸರು ರಾಗಿಣಿಯನ್ನು ಮನೆಗೆ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...