alex Certify
ಕನ್ನಡ ದುನಿಯಾ       Mobile App
       

Kannada Duniya

ರೂಮ್ ಫ್ರೆಶನರ್ ವಾಸನೆ ಬರ್ತಿದ್ದಂತೆ ಹಾವಿನ ಡಾನ್ಸ್ ಮಾಡ್ತಾನೆ ಪತಿ…!

ಉತ್ತರ ಪ್ರದೇಶದ ಮಹಿಳಾ ಆಯೋಗದ ಮುಂದೆ ದೂರುಗಳನ್ನು ಹಿಡಿದು ಮಹಿಳೆಯರು ಬರೋದು ಮಾಮೂಲಿ. ಕೆಲವೊಂದು ಸಾಮಾನ್ಯವಾಗಿದ್ರೆ ಮತ್ತೆ ಕೆಲ ಮಹಿಳೆಯರ ದೂರುಗಳು ವಿಚಿತ್ರವಾಗಿರುತ್ತವೆ. ನವ ವಿವಾಹಿತೆಯೊಬ್ಬಳು ಮಹಿಳಾ ಆಯೋಗದ ಮುಂದೆ ಹೇಳಿದ ಮಾತು ಕೇಳಿ ಸದಸ್ಯರು ದಂಗಾಗಿದ್ದಾರೆ.

ನವವಿವಾಹಿತೆ ಪತಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ರೂಮ್ ಫ್ರೆಶನರ್ ವಾಸನೆ ಬರ್ತಿದ್ದಂತೆ ಪತಿ ಹಾವಿನಂತೆ ನೃತ್ಯ ಮಾಡಲು ಶುರುಮಾಡ್ತಾನಂತೆ. ಇದ್ರಿಂದಾಗಿ ಪತಿ ಜೊತೆ ವಾಸವಾಗೋದು ಕಷ್ಟವಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

ಜನವರಿ 22, 2017ರಂದು ರೈಲ್ವೆ ಕಾಲೋನಿ ನಿವಾಸಿ ಅಮಿತ್ ಗೌತಮ್ ಜೊತೆ ಮಹಿಳೆ ಮದುವೆಯಾಗಿತ್ತು. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಗೌತಮ್ ಹೇಳಿದ್ದ. ಆದ್ರೆ ಆತ ರೈಲ್ವೆ ಬಿಡಿಭಾಗ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದಾನೆ. ಸುಳ್ಳು ಹೇಳಿ ಮದುವೆ ಮಾಡಿಸಲಾಗಿದೆ. ನಶೆಯಲ್ಲಿರುವ ಪತಿ ವಿಚಿತ್ರವಾಗಿ ವರ್ತನೆ ಮಾಡ್ತಾನೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಮಾವ ನನ್ನ ಕೂದಲು, ಕಣ್ಣಿನ ಮೇಲೆ ಕವನ ಬರೆದು ಹತ್ತಿರ ಬರುವ ಯತ್ನ ಮಾಡುತ್ತಿದ್ದಾನೆಂದು ಆಕೆ ಆರೋಪ ಮಾಡಿದ್ದಾಳೆ. ಆದ್ರೆ ಗೌತಮ್ ಈ ಆರೋಪವನ್ನು ತಳ್ಳಿ ಹಾಕಿದ್ದಾನೆ. ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿರುವ ನಾನು ಬೇರೆ ಬೇರೆ ಪ್ರಯೋಗ ಮಾಡುತ್ತಿರುತ್ತೇನೆ ಎಂದಿದ್ದಾನೆ. ಈ ಬಗ್ಗೆ ಮಹಿಳಾ ಆಯೋಗ ವಿಚಾರಣೆ ಶುರು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...