alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಬಿಚ್ಚಿಟ್ಟಿದ್ದಾಳೆ ಕುಡುಕ ಪತಿ ಮಾಡಿದ್ದ ದೊಡ್ಡ ಮೋಸ

ಮಧ್ಯಪ್ರದೇಶದಲ್ಲಿ ಪತಿಯೊಬ್ಬ ಪತ್ನಿ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಮನೆ ಖರ್ಚಿನ ಹೆಸರು ಹೇಳಿ ಪತ್ನಿ ಅಂಡಾಣುಗಳನ್ನು ಮಾರಾಟ ಮಾಡಿದ್ದಾನೆ.

ಮನೆ ಖರ್ಚು ನಿಭಾಯಿಸಲು, ಸಾಲ ತೀರಿಸಲು, ಅದಕ್ಕೆ ಇದಕ್ಕೆ ಎಂದು ಮಹಿಳೆ ಅಂಡಾಣು ಮಾರಿದ ಪತಿ ಬಂದ ಹಣವನ್ನು ತನ್ನ ಮೋಜಿಗೆ ಬಳಸಿದ್ದಾನೆ. ಕುಡಿತದ ಚಟಕ್ಕೆ ಹಣವನ್ನು ಹಾಳು ಮಾಡಿದ್ದಾನೆ. ಮಹಿಳೆ ಪತ್ರಿಕೆಯೊಂದರಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

ಕುಡಿತದ ಚಟಕ್ಕೆ ದಾಸನಾದ ಪತಿ ಕೆಲಸ ಮಾಡುವುದಿಲ್ಲ. ಅಂಡಾಣು ಮಾರಿದ್ರೆ ಹಣ ಬರುತ್ತೆ ಎಂದು ನನ್ನನ್ನು ನಂಬಿಸಿ ಎರಡು ಬಾರಿ ಅಂಡಾಣು ಮಾರಾಟ ಮಾಡಿದ್ದಾನೆ. ಪ್ರತಿ ಬಾರಿ 45 ಸಾವಿರ ಸಿಕ್ಕಿದೆ. ಆದ್ರೆ ಒಂದು ರೂಪಾಯಿಯನ್ನೂ ಮನೆಗೆ ನೀಡಿಲ್ಲ.

ಮೂರನೇ ಬಾರಿ ವೈದ್ಯರು ಅಂಡಾಣು ಪಡೆಯಲು ನಿರಾಕರಿಸಿದ್ರು. ಬಾಡಿಗೆ ತಾಯಿಯಾಗುವಂತೆ ಪತಿ ಒತ್ತಾಯಿಸಿ ಇದನ್ನೂ ಮಾಡಿಸ್ದ. ತಿಂಗಳಿಗೆ 30 ಸಾವಿರ ಸಿಗುತ್ತಿತ್ತು. ಆದ್ರೆ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಹಣ ನೀಡಲಿಲ್ಲ. ಇದಕ್ಕೆ ಪತಿ ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿದ್ದ ಎಂದು ಮಹಿಳೆ ಹೇಳಿದ್ದಾಳೆ. ಇವರಿಗೆ ಮದುವೆಯಾಗಿ 13 ವರ್ಷವಾಗಿದ್ದು,ಇಬ್ಬರು ಮಕ್ಕಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...