alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನೇ ಕೊಂದಿದ್ದಾನೆ ಕ್ರೂರಿ

wife

ದೆಹಲಿಯ ಜಹಾಂಗಿರ್ಪುರಿಯಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಪತ್ನಿಗೆ ಅಕ್ರಮ ಸಂಬಂಧವಿದೆ ಅನ್ನೋ ಅನುಮಾನದ ಮೇಲೆ ಈ ಕೃತ್ಯ ಎಸಗಿದ್ದಾನೆ. ಆಶುಪಾಲ್ ಹಾಗೂ ಸಿಮ್ರನ್ ದಂಪತಿಗೆ ಒಬ್ಬ ಮಗಳು ಕೂಡ ಇದ್ಲು.

ಶನಿವಾರ ಸಿಮ್ರನ್ ಸಹೋದರ ಆಕೆಗೆ ಕರೆ ಮಾಡಿದ್ದ, ಆದ್ರೆ ಅವಳು ಕಾಲ್ ರಿಸೀವ್ ಮಾಡಿರಲಿಲ್ಲ. ಮನೆಯ ಬಳಿ ಬಂದಾಗ ಆಶುಪಾಲ್ ಬಾಗಿಲು ಲಾಕ್ ಮಾಡಿಕೊಂಡು ಮಾರ್ಕೆಟ್ ಗೆ ಹೊರಟಿದ್ದ. ಆಕೆಗೆ ಮೈಹುಷಾರಿಲ್ಲ, ಮಲಗಿದ್ದಾಳೆ ಅಂತಾ ಹೇಳಿದ್ದ.

ಎಷ್ಟು ಕರೆದ್ರೂ ಸಿಮ್ರನ್ ಬಾಗಿಲು ತೆರೆಯದೇ ಇದ್ದಾಗ ಅನುಮಾನ ಬಂದ ಸಹೋದರ ಬಾಗಿಲು ಮುರಿದು ಒಳಹೋಗಿದ್ದ. ಅಲ್ಲಿ ಸಿಮ್ರನ್ ಶವವಾಗಿ ಮಲಗಿದ್ಲು. ಆಶುಪಾಲ್ ಈ ಕೃತ್ಯ ಎಸಗುವ ಮುನ್ನ ಮಗಳನ್ನು ಅಜ್ಜಿ ಮನೆಗೆ ಕಳಿಸಿದ್ದ.

ಗರ್ಭಿಣಿ ಪತ್ನಿಯನ್ನು ಕೊಂದ ಆಶುಪಾಲ್ ತಲೆಮರೆಸಿಕೊಂಡಿದ್ದಾನೆ. ಸಿಮ್ರನ್ ಪೋಷಕರು ಪ್ರಕರಣ ದಾಖಲಿಸಿದ್ದು, ಪೊಲೀಸರು ಹಂತಕನಿಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...