alex Certify
ಕನ್ನಡ ದುನಿಯಾ       Mobile App
       

Kannada Duniya

2 ನೇ ಮದುವೆಯಾದ ಪತಿ: ಬಿಜೆಪಿ ಸಚಿವೆ ಮನೆಗೆ ಬಂದ್ಲು ಪತ್ನಿ

ಉತ್ತರ ಪ್ರದೇಶದ ಜಾನ್ಪುರದಲ್ಲಿ ಪತಿಯಿಂದ ಬೇಸತ್ತ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನ್ಯಾಯ ಕೊಡಿಸುವಂತೆ ಪತ್ನಿ ಉಸ್ತುವಾರಿ ಸಚಿವೆ ರೀಟಾ ಬಹುಗುಣ ಜೋಶಿ ಮೊರೆ ಹೋಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

2012ರಲ್ಲಿ ಅಮನದೀಪ್ ಕೌರ್ ಮದುವೆ ಮನ್ದೀಪ್ ಕೌರ್ ಜೊತೆ ನಡೆದಿತ್ತು. ಮದುವೆ ವೇಳೆ 20 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಮದುವೆ ನಂತ್ರ ವರದಕ್ಷಿಣೆ ಕಿರುಕುಳ ಶುರುಮಾಡಿದ್ದರಂತೆ ಪತಿ ಮನೆಯವರು. ಕೋಣೆಯಲ್ಲಿ ಕೂಡಿಹಾಕಿ ಹೊಡೆಯುತ್ತಿದ್ದರಂತೆ.

ಈ ವಿಷ್ಯ ಅಮನದೀಪ್ ಕೌರ್ ಪಾಲಕರಿಗೆ ಗೊತ್ತಾಗಿದೆ. ಅವರು ಸ್ವಲ್ಪ ಹಣವನ್ನು ಪತಿ ಮನೆಯವರಿಗೆ ನೀಡಿದ್ದಾರೆ. ಇದ್ರಿಂದ ತೃಪ್ತಿ ಹೊಂದದ ಮನ್ದೀಪ್ ಕೌರ್ ಮನೆಯವರು ಮತ್ತೆ ಹಲ್ಲೆ ಶುರು ಮಾಡಿದ್ದಾರೆ. ಅಮನದೀಪ್ ಕೌರ್ ಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ.

ತವರು ಸೇರಿದ್ದ ಅಮನದೀಪ್ ಗೆ ಪತಿ ಎರಡನೇ ಮದುವೆಯಾಗಿರುವ ಸಂಗತಿ ಈಗ ಗೊತ್ತಾಗಿದೆ. ಪತಿ ವಿರುದ್ಧ ಅಮನದೀಪ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...