alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪತಿ

2018ರ ಮೇ ತಿಂಗಳಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಿಮಗೆ ನೆನಪಿರಬಹುದು. ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಸಾಕಷ್ಟು ಕರಾಳತೆಯನ್ನು ಸೃಷ್ಟಿಸಿತ್ತು. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಲಿನಿ ಎಂಬುವವರಿಗೂ ವೈರಸ್ ಹರಡಿತ್ತು. ಆನಂತರದಲ್ಲಿ ಅವರು ವಿದೇಶದಲ್ಲಿದ್ದ ತಮ್ಮ ಪತಿಗೆ ಪತ್ರ ಬರೆದಿಟ್ಟು ಸಾವನ್ನಪ್ಪಿದ್ದರು. ಕೆಲವೇ ನಿಮಿಷಗಳಲ್ಲಿ ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಸುಟ್ಟುಹಾಕಲಾಗಿತ್ತು.

ಈಗ ಆಕೆಯ ಪತಿ ಸಜೀಶ್ ಪುಟ್ಟು ಶೆರಿ ಭಾರತದಲ್ಲೇ ನೆಲೆಸಿದ್ದಾರೆ. ಕೇರಳದ ಆರೋಗ್ಯ ಇಲಾಖೆಯಲ್ಲಿ ಅವರಿಗೆ ಸರ್ಕಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದೆ. ಕಳೆದ ತಿಂಗಳಷ್ಟೇ ಸಜೀಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲ್ಲದೇ ಸಜೀಶ್ ಮತ್ತು ಲಿನಿ ಅವರ ಇಬ್ಬರು ಮಕ್ಕಳ ಹೆಸರಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿಗಳ ಠೇವಣಿ ಇಟ್ಟಿದೆ. ಈಗ ವಿಚಾರ ಏನಂದ್ರೆ ಕೇರಳದ ಪ್ರವಾಹ ಸಂತ್ರಸ್ಥರ ಪರಿಹಾರ ನಿಧಿಗೆ ಸಜೀಶ್ ತಮ್ಮ ಮೊದಲ ತಿಂಗಳ ವೇತನವನ್ನು ದಾನ ಮಾಡಿದ್ದಾರೆ.

ಹೌದು. ಕೇರಳ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಸಜೀಶ್ ತಮ್ಮ ಮೊದಲ ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಪತ್ನಿ ಬದುಕಿದ್ದರೆ ಖಂಡಿತವಾಗಿಯೂ ಆಕೆ ಸಂತ್ರಸ್ಥರ ಆರೈಕೆ ಮಾಡುತ್ತಿದ್ದಳು. ತನ್ನ ಕೈಲಾದಷ್ಟು ಸಹಾಯವನ್ನು ಆಕೆ ಮಾಡುತ್ತಿದ್ದಳು. ಆ ಕರ್ತವ್ಯವನ್ನು ತಾನು ಮಾಡ್ತಿರೋದಾಗಿ ಸಜೀಶ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...