alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯದಲ್ಲಿ ವಿರಸ, ನಡೀತು ದುರಂತ

dehli

ನವದೆಹಲಿ: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ, ಪತಿ, ಪತ್ನಿ ನಡುವೆ ನಿರಂತರ ಜಗಳ ನಡೆಯುತ್ತದೆ. ಸಣ್ಣ ಪುಟ್ಟ ವಿಚಾರಕ್ಕೂ ದಿನಗಟ್ಟಲೇ ಜಗಳ ಮುಂದುವರೆದಿರುತ್ತದೆ.

ಹೀಗೆ ದಂಪತಿ ನಡುವೆ ಕಲಹ ಉಂಟಾಗಿ ನಡೆದ ಜಗಳದಲ್ಲಿ ಪತ್ನಿಯನ್ನು 2 ನೇ ಮಹಡಿಯಿಂದ ನೂಕಿ ಸಾಯಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಲ್ಯಾಣಪುರಿಯಲ್ಲಿ ವಾಸವಾಗಿದ್ದ 43 ವರ್ಷದ ಲಲಿತಾ ಅವರನ್ನು ಆಕೆಯ ಗಂಡ ದಿಲೀಪ್ ಕೆಳಕ್ಕೆ ನೂಕಿ ಸಾಯಿಸಿದ್ದಾನೆ ಎನ್ನಲಾಗಿದೆ. ಕಳೆದ 4 ವರ್ಷಗಳಿಂದ ಪತಿಯಿಂದ ದೂರವಾಗಿ, ಲಲಿತಾ ಮಗಳೊಂದಿಗೆ ವಾಸವಾಗಿದ್ದರು. ಅಲ್ಲಿಗೆ ಬಂದು ದಿಲೀಪ್ ಜಗಳವಾಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಪತ್ನಿಯನ್ನು ಕೆಳಕ್ಕೆ ನೂಕಿದ್ದಾನೆ. ಅಲ್ಲಿದ್ದವರು ಲಲಿತಾರನ್ನು ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ದಿಲೀಪ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...