alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯರನ್ನು ಬದಲಿಸಿ ರಾತ್ರಿ ಕಳೆಯುವ ಪ್ಲಾನ್ ಮಾಡಿದ್ದ ಪತಿ…!

ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯನ್ನು ಬದಲಿಸಿ ರಾತ್ರಿ ಕಳೆಯುವ ಪ್ಲಾನ್ ಮಾಡಿದ್ದ ಪತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಪತಿಗೆ ತನ್ನ ಪತ್ನಿ ಮೇಲೆ ಪ್ರೀತಿಯಿರಲಿಲ್ಲ. ಪತಿ ತನ್ನ ಪತ್ನಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಆಕೆ ಜೊತೆ ಸಂಬಂಧ ಬೆಳೆಸಲು ನಿರ್ಧರಿಸಿದ್ದ. ಒಂದು ರಾತ್ರಿ ಆಕೆ ಜೊತೆ ಕಳೆಯುವುದು ಆತನ ಉದ್ದೇಶವಾಗಿತ್ತು. ಇತ್ತ ಮೃತ ಮಹಿಳೆಯ ಸಹೋದರಿಯ ಪತಿ ಕೂಡ ತನ್ನ ಪತ್ನಿ ಬದಲು ಮೃತ ಮಹಿಳೆಯನ್ನು ಪ್ರೀತಿ ಮಾಡ್ತಿದ್ದ.

ಇಬ್ಬರೂ ಮಾತನಾಡಿ ಪತ್ನಿಯರನ್ನು ಅದಲು ಬದಲು ಮಾಡಲು ಪ್ಲಾನ್ ಮಾಡಿದ್ದಾರೆ. ಇದಕ್ಕೆ ಮೃತ ಮಹಿಳೆ ಸಹೋದರಿ ಕೂಡ ಒಪ್ಪಿದ್ದಾಳೆ. ಆದ್ರೆ ಮೃತ ಮಹಿಳೆ ವಿರೋಧಿಸಿದ್ದಳು ಎನ್ನಲಾಗಿದೆ. ಪತಿಗೆ ಚಪ್ಪಲಿ ಏಟು ನೀಡಿದ್ದ ಪತ್ನಿ ಕೋಪಗೊಂಡಿದ್ದಳಂತೆ. ಆಕೆಯ ವರ್ತನೆಯಿಂದ ಕೋಪಗೊಂಡ ಪತಿ, ಸುಳ್ಳು ಹೇಳಿ ತವರಿಗೆ ಕಳುಹಿಸಿದ್ದಾನೆ. ನಂತ್ರ ಫೋನ್ ಮಾಡಿ ಮನೆ ಹೊರಗೆ ಕರೆಯಿಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆ ಆರೋಪಿ ಪತ್ನಿಯ ಸಹೋದರಿ ಪತಿ ಕೂಡ ಅಲ್ಲೇ ಇದ್ದ ಎನ್ನಲಾಗಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...