alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತಿನಲ್ಲಿ ಯಡವಟ್ಟು: ಪತಿ ಜಾಗದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಕಂಡು ಪತ್ನಿ ಕಂಗಾಲು

ಹೈದರಾಬಾದ್: ತೆಲಂಗಾಣ ಸರ್ಕಾರದ ಜಾಹೀರಾತಿನಲ್ಲಾದ ಯಡವಟ್ಟಿನಿಂದಾಗಿ ಇಡೀ ಕುಟುಂಬ ಅವಮಾನಕ್ಕೀಡಾಗಿದ್ದು, ಮನೆಯವರೆಲ್ಲ ಮುಜುಗರಕ್ಕೀಡಾಗುವಂತಾಗಿದೆ ಎಂದು ದಂಪತಿಗಳಿಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರಿ ಯೋಜನೆಗಳಾದ ರೈತ ಭೀಮಾ ಮತ್ತು ಕಾಂತಿ ವೆಳುಗು ಯೋಜನೆ ಜಾಹೀರಾತುಗಳಲ್ಲಿ ಅನುಮತಿ ಪಡೆಯದೆ ಛಾಯಾಚಿತ್ರವನ್ನು ಬಳಸಿದ್ದಷ್ಟೇ ಅಲ್ಲದೇ, ನನ್ನ ಮತ್ತು ಮಗಳ ಚಿತ್ರದ ಪಕ್ಕದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಪತಿ ಎಂಬಂತೆ ಬಿಂಬಿಸಲಾಗಿದೆ ಎಂದು ಪದ್ಮಾ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು ತಪ್ಪಿನಿಂದಾಗಿ ನಮ್ಮ ಕುಟುಂಬಕ್ಕೆ ಅವಮಾನವಾಗಿದೆ. ಅತ್ತೆ- ಮಾವ, ಸಂಬಂಧಿಕರು ಮುಜುಗರಕ್ಕೊಳಗಾಗಿದ್ದು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಸ್ವಾತಂತ್ರ್ಯ ದಿನಾಚರಣೆಯಂದು ರೈತ ಬಂಧು ಮತ್ತು ಕಾಂತಿ ವೆಳುಗು ಎಂಬ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ಕುರಿತು ಪೂರ್ಣ ಪುಟದ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿತ್ತು. ಕೆಲ ಪತ್ರಿಕೆಗಳಲ್ಲಿ ಪದ್ಮಾ ಹಾಗೂ ಆಕೆಯ ಮಗಳು ಮತ್ತು ಪತಿ ನಾಗರಾಜು ಭಾವಚಿತ್ರವನ್ನು ಜಾಹೀರಾತಿನಲ್ಲಿ ಬಳಸಲಾಗಿದ್ದರೆ, ಇನ್ನು ಕೆಲ ಪತ್ರಿಕೆಯಲ್ಲಿ ಆಕೆಯ ಪತಿ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಪತಿಯೆಂಬಂತೆ ಬಿಂಬಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...