alex Certify
ಕನ್ನಡ ದುನಿಯಾ       Mobile App
       

Kannada Duniya

ತಲಾಖ್ ಹೇಳಿದ ಪತಿಗೆ ಪತ್ನಿ ನೀಡಿದ್ಲು ಇಂಥ ಉತ್ತರ

agency-file-picture

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಚಿಕ್ಕ ವಿಚಾರಕ್ಕೆ ಪತ್ನಿಗೆ ತಲಾಖ್ ನೀಡಲು ಮುಂದಾಗಿದ್ದಾನೆ. ಹೆಚ್ಚಿನ ಸಮಯ ಪತ್ನಿ ತನ್ನ ತವರಿನಲ್ಲಿರ್ತಾಳೆಂಬ ಕಾರಣಕ್ಕೆ ಪತಿ ತಲಾಖ್ ಹೇಳಿದ್ದಾನೆ. ಆದ್ರೆ ಪತಿಯ ತಲಾಖ್ ತನಗೆ ಕೇಳಿಯೇ ಇಲ್ಲ ಎಂಬಂತಿದ್ದಾಳೆ ಪತ್ನಿ.

ಪತಿ ಮೂರು ಬಾರಿ ತಲಾಖ್ ಹೇಳಿದ್ದಾನಂತೆ. ಆದ್ರೆ ನನಗೆ ಎರಡು ಬಾರಿ ಮಾತ್ರ ಕೇಳಿದೆ ಎಂದಿದ್ದಾಳೆ ಪತ್ನಿ. ಹಾಗಾಗಿ ಇದನ್ನು ತಲಾಖ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಗಂಡ ಕಿರುಕುಳ ನೀಡ್ತಾನೆಂದು ಆರೋಪಿಸಿ ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾಳೆ.

ಮಹಿಳೆ ಮದುವೆ 2003ರಲ್ಲಿ ನೆರವೇರಿತ್ತು. ಮದುವೆ ನಂತ್ರ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡ್ತಿದ್ದರಂತೆ. 2 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರುತ್ತಿದ್ದರಂತೆ. ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಹೊಡೆಯುತ್ತಿದ್ದನಂತೆ. ನಂತ್ರ ತವರಿಗೆ ಕಳುಹಿಸುತ್ತಿದ್ದನಂತೆ. ಅಲ್ಲಿಯೇ ಚಿಕಿತ್ಸೆ ಪಡೆದು ವಾಪಸ್ ಬರ್ತಿದ್ದಳಂತೆ ಮಹಿಳೆ. ಆದ್ರೆ ತಂದೆ-ತಾಯಿ ಮುಖ ನೋಡಿ ಈವರೆಗೂ ದೂರು ನೀಡಿರಲಿಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...