alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು ಕಚ್ಚಿದ ಪತ್ನಿಯನ್ನು ಬದುಕಿಸಲು ಸಗಣಿಯಲ್ಲಿ ಮುಚ್ಚಿಟ್ಟ ಪತಿ

ಹೊಲಕ್ಕೆ ಹೋಗಿದ್ದ ಮಹಿಳೆಯೊಬ್ಬಳಿಗೆ ಹಾವು ಕಚ್ಚಿದ ವೇಳೆ ಆಕೆಯ ಪತಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ಯುವ ಬದಲು ಮಂತ್ರವಾದಿಯ ಮಾತು ಕೇಳಿ ಸಗಣಿಯಲ್ಲಿ ಮುಚ್ಚಿ ಪತ್ನಿಯ ಸಾವಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನ ಗ್ರಾಮವೊಂದರಲ್ಲಿ ನಡೆದಿದೆ.

35 ವರ್ಷದ ದೇವೇಂದ್ರಿ ಎಂಬಾಕೆ ಕಟ್ಟಿಗೆ ತರಲೆಂದು ಹೊಲಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ಆಕೆಯ ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಮನೆಗೆ ದೌಡಾಯಿಸಿದ ದೇವೇಂದ್ರಿ ತನಗೆ ಹಾವು ಕಚ್ಚಿರುವ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ.

ಪತ್ನಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪತಿ ಅದನ್ನು ಬಿಟ್ಟು ಹಾವಿನ ವಿಷ ಇಳಿಸಲು ಮಂತ್ರವಾದಿಯ ಮೊರೆ ಹೋಗಿದ್ದಾನೆ. ಆತನ ಸಲಹೆಯಂತೆ ದೇವೇಂದ್ರಿಯನ್ನು ಸಗಣಿಯಲ್ಲಿ ಮುಚ್ಚಲಾಗಿದ್ದು, ಮಂತ್ರವಾದಿ ಮಂತ್ರ ಹೇಳತೊಡಗಿದ್ದಾನೆ. ಬಳಿಕ ದೇವೇಂದ್ರಿಯನ್ನು ಸಗಣಿಯಿಂದ ತೆಗೆದು ನೋಡಿದ ವೇಳೆ ಸಾವನ್ನಪ್ಪಿರುವುದು ಕಂಡು ಬಂದಿದೆ. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...