alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ನೀಡ್ತಿದ್ದ ಚಿತ್ರಹಿಂಸೆ ವಿಡಿಯೋ ನೋಡಿ ದಂಗಾದ ಪೊಲೀಸ್

ಉತ್ತರ ಪ್ರದೇಶದ ಷಹಜಹಾನ್ಪುರದಲ್ಲಿ ಮಹಿಳೆಗೆ ಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದೆ. ಪತಿಯೇ ಪತ್ನಿಗೆ ಚಿತ್ರಹಿಂಸೆ ನೀಡಿದ್ದಾನೆ. ವರದಕ್ಷಿಣೆಗಾಗಿ ಪತ್ನಿಯನ್ನು ಮೇಲೆ ಕಟ್ಟಿ ಪತಿ ಹಲ್ಲೆ ನಡೆಸುತ್ತಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ನಾಲ್ಕು ವರ್ಷಗಳ ಹಿಂದೆ ಅಶೋಕ್ ಹಾಗೂ ರುಚಿ ಮದುವೆ ನಡೆದಿತ್ತು. ಮದುವೆ ನಂತ್ರ ಅಶೋಕ್ ಮನೆಯವರು ವರದಕ್ಷಿಣೆ ಕಿರುಕುಳ ಶುರು ಮಾಡಿದ್ದರು. ಒಂದು ವರ್ಷದ ಹಿಂದೆ ರುಚಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ವೇಳೆ ಖರ್ಚಾದ ಹಣವನ್ನು ನೀಡುವಂತೆ ಅಶೋಕ್ ರುಚಿ ಮೇಲೆ ಒತ್ತಡ ಹೇರಲು ಶುರು ಮಾಡಿದ್ದಾನೆ.

ರುಚಿ ತವರಿನಿಂದ ಹಣ ತರಲು ನಿರಾಕರಿಸಿದ್ದಾಳೆ. ಇದೇ ಕಾರಣಕ್ಕೆ ರುಚಿಗೆ ಕೋಲಿನಲ್ಲಿ ಹೊಡೆದಿದ್ದಾನೆ. ರುಚಿ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆ ಕೈಗಳನ್ನು ಮೇಲೆ ಕಟ್ಟಿಹಾಕಿದ್ದಾನೆ. ಹಲ್ಲೆ ನಡೆಸಿದ ವಿಡಿಯೋವನ್ನು ರುಚಿ ಸಹೋದರನಿಗೂ ಕಳುಹಿಸಿದ್ದಾನೆ. ವರದಕ್ಷಿಣೆ ನೀಡಿಲ್ಲವಾದ್ರೆ ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ.

ವಿಡಿಯೋ ನೋಡಿದ ಸಹೋದರ ರುಚಿ ಮನೆಗೆ ಬಂದಿದ್ದಾನೆ. ಈ ವೇಳೆ ರುಚಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎನ್ನಲಾಗಿದೆ. ಅಶೋಕ್ ಸೇರಿದಂತೆ ಮನೆಯಲ್ಲಿ ಯಾರೂ ಇರಲಿಲ್ಲ. ಅಶೋಕ್ ಹಾಗೂ ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...