alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನಕ್ಕೆ ಕಾರಣವಾಯ್ತು ಸೀರೆ…!

ಪುಣೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಪತ್ನಿ ಸೀರೆಯುಡುತ್ತಿಲ್ಲವೆಂಬ ಕಾರಣಕ್ಕೆ ಪತಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ಶಿವಾಜಿ ನಗರದ ಜಿಲ್ಲಾ ನ್ಯಾಯಾಲಯ ಪತಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ವಿಚ್ಛೇದನ ನೀಡದೆ ದಂಪತಿಯನ್ನು ಒಂದು ಮಾಡಿದೆ.

ಪತಿ ಹಾಗೂ ಪತ್ನಿ ನಡುವೆ ಅತ್ತೆ ವಿಲನ್ ಆಗಿದ್ದಳು. ಅತ್ತೆಗೆ ಮನೆಯಲ್ಲಿ ಸೊಸೆ ಚೂಡಿದಾರ್ ಧರಿಸುವುದು ಇಷ್ಟವಿರಲಿಲ್ಲ. ಆದ್ರೆ ಸೊಸೆಗೆ ಸೀರೆಯುಡುವುದು ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಅಕ್ಕಪಕ್ಕದವರು ಕೆಟ್ಟದಾಗಿ ಮಾತನಾಡಿಕೊಳ್ತಾರೆ, ಸೀರೆಯುಡು ಎಂದು ಅತ್ತೆ ಹಿಂಸೆ ನೀಡುತ್ತಿದ್ದಳಂತೆ. ಆದ್ರೆ ಸೊಸೆ ಇದಕ್ಕೆ ಒಪ್ಪಿರಲಿಲ್ಲವಂತೆ.

ಈ ಮಧ್ಯೆ ಸೊಸೆ ಹೆರಿಗೆಗೆ ತವರಿಗೆ ಹೋಗಿದ್ದಾಳೆ. ಮಗು ಜನಿಸಿದ ಮೇಲೂ ಪತಿ ಮಗು ನೋಡಲು ಬರಲಿಲ್ಲ. ಪತಿ ಬದಲು ಆತನ ವಿಚ್ಛೇದನದ ನೊಟೀಸ್ ಮನೆಗೆ ಬಂದಿದೆ. ಕೋರ್ಟ್ ಇಬ್ಬರನ್ನು ಕರೆಸಿ ಮಾತುಕತೆ ನಡೆಸಿದೆ. ಅತ್ತೆಯ ಹಳೆ ಸಂಪ್ರದಾಯಕ್ಕೆ ಪತಿ-ಪತ್ನಿ ಹಾಗೂ ಮಗುವಿನ ಬಾಳು ಹಾಳಾಗ್ತಿದೆ ಎಂಬುದನ್ನು ವಿವರಿಸಿದೆ. ಪ್ರತಿ ದಿನ ಮನೆಯಲ್ಲಿ ಪತ್ನಿ ಚೂಡಿ ಧರಿಸಬಹುದು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೀರೆಯುಡಲಿ ಎಂಬ ತೀರ್ಮಾನಕ್ಕೆ ಪತಿ ಒಪ್ಪಿಗೆ ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...