alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆ ದುರಾಸೆಗೆ ಗರ್ಭಿಣಿ ಕೈಕಾಲು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕಿದ್ರು

ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗರ್ಭಿಣಿಗೆ ಹಿಂಸೆ ನೀಡಿ ಆಕೆಯನ್ನು ಗಂಡನ ಮನೆಯವರು ಕೋಣೆಯಲ್ಲಿ 2 ದಿನ ಕಟ್ಟಿ ಹಾಕಿದ್ದರು. ಗರ್ಭಿಣಿ ಸಂಬಂಧಿಕರ ದೂರಿನ ನಂತ್ರ ಪೊಲೀಸರು ಮಹಿಳೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಬೆಳಕಿಗೆ ಬರ್ತಿದ್ದಂತೆ ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ. 5 ತಿಂಗಳ ಗರ್ಭಿಣಿಯನ್ನು ಗಂಡ ತನ್ನ ಕಾರ್ಖಾನೆಯಲ್ಲಿ ಕೂಡಿ ಹಾಕಿದ್ದ. ಕೈ ಕಾಲು ಕಟ್ಟಿ ಕತ್ತಲೆ ಕೋಣೆಯಲ್ಲಿ 48 ಗಂಟೆಗಳವರೆಗೆ ಇಟ್ಟಿದ್ದ. ಒಂದೂವರೆ ವರ್ಷದ ಹಿಂದೆ ಮದುವೆ ನಡೆದಿತ್ತು. ಕೆಲ ತಿಂಗಳಿಂದ ಗಂಡನ ಮನೆಯವರು ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದರಂತೆ.

ಈ ಬಗ್ಗೆ ಗರ್ಭಿಣಿ ಪಾಲಕರಿಗೆ ಹೇಳಿದ್ದಳು. ಎರಡು ದಿನಗಳಿಂದ ಮಗಳು ಫೋನ್ ತೆಗೆದುಕೊಳ್ತಿರಲಿಲ್ಲ. ಇದ್ರಿಂದ ಕಂಗಾಲಾದ ಮಹಿಳೆ ಪಾಲಕರು, ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...