alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿವಿನಿಂದ ಪರಿತಪಿಸುತ್ತಿದ್ದ ಪ್ರವಾಸಿಗ ಮಾಡಿದ್ದೇನು?

munnar-tour-packages_1481371325ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಹಳೆಯ ನೋಟುಗಳನ್ನು ಜಮಾ ಮಾಡಲು ಹಾಗೂ ಹಣ ಪಡೆಯಲು ಬ್ಯಾಂಕ್ ಗಳ ಮುಂದೆ ಉದ್ದದ ಕ್ಯೂ ಇನ್ನೂ ಮುಂದುವರೆದಿದೆ.

ನೋಟು ನಿಷೇಧದ ಪರಿಣಾಮ ದಿನನಿತ್ಯದ ವ್ಯವಹಾರಗಳಿಗೆ ಅಗತ್ಯ ಹಣ ಪಡೆಯಲು ಸಾಮಾನ್ಯ ಜನ ಪರಿತಪಿಸುತ್ತಿದ್ದರೆ ಕೆಲ ಕಾಳ ಧನಿಕರು ಮಾತ್ರ ಬ್ಯಾಂಕ್ ಅಧಿಕಾರಿಗಳೊಂದಿಗೆ ಕೈ ಮಿಲಾಯಿಸಿ ಸರಾಗವಾಗಿ ಕೋಟಿಗಟ್ಟಲೆ ಹೊಸ ನೋಟುಗಳನ್ನು ಪಡೆದುಕೊಂಡಿದ್ದು, ಅಂತವರಿಗೆ ಸಿಬಿಐ ಹಾಗೂ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದಾರೆ.

ನೋಟು ನಿಷೇಧದ ಬಿಸಿ ಪ್ರವಾಸಿಗರಿಗೂ ತಟ್ಟಿದ್ದು, ಕೇರಳ ಪ್ರವಾಸಕ್ಕೆ ಬಂದಿದ್ದ ಅಮೆರಿಕಾ ಪ್ರವಾಸಿಗನೊಬ್ಬ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಬಿಲ್ ನೀಡುವ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ರೆಸ್ಟೋರೆಂಟ್ ಕೆಲಸಗಾರರು ಆತನ ಬೆನ್ನಟ್ಟಿ ಹಿಡಿದಿದ್ದು, ಸಿಕ್ಕಿ ಬಿದ್ದ ವೇಳೆ ತನ್ನ ಅಕೌಂಟ್ ನಲ್ಲಿ ಸಾಕಷ್ಟು ಹಣವಿದ್ದರೂ ಅದನ್ನು ಪಡೆಯಲಾಗದೆ ಪರಿತಪಿಸುತ್ತಿರುವ ತನ್ನ ಕಥೆ ಹೇಳಿಕೊಂಡಿದ್ದಾನೆ. ಆತನ ಪರಿಸ್ಥಿತಿ ಅರ್ಥ ಮಾಡಿಕೊಂಡ ರೆಸ್ಟೋರೆಂಟ್ ಮಾಲೀಕರು ಕೊನೆಗೆ ಹಣ ಪಡೆಯದೆ ಆತನನ್ನು ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...