alex Certify
ಕನ್ನಡ ದುನಿಯಾ       Mobile App
       

Kannada Duniya

50000 ರೂ. ಕೊಟ್ಟು ಮಹಿಳೆ ಖರೀದಿಸಿದ್ದವ ರಾತ್ರಿ ನೀಡ್ತಿದ್ದ ಚಿತ್ರಹಿಂಸೆ

ಭೋಪಾಲ್ ನಲ್ಲಿ ಮಾನವ ಕಳ್ಳಸಾಗಣೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಧಾನಿಯಿಂದ ನಾಪತ್ತೆಯಾಗಿದ್ದ 28 ವರ್ಷದ ಮಹಿಳೆ ಹಾಗೂ ಆಕೆಯ 3 ವರ್ಷದ ಮಗಳನ್ನು ಪೊಲೀಸರು 72 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ. ಆರೋಪಿ ಮಹಿಳೆಯನ್ನು ರಾಜ್ಗಢದಲ್ಲಿ 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಮೂರು ವರ್ಷದ ಮಗುವನ್ನು ಭಿಕ್ಷೆ ಬೇಡಲು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಸೇರಿ ಮೂರು ಮಂದಿ ನಾಪತ್ತೆಯಾಗಿದ್ದಾರೆ. ಶಹಜಹಾನಾಬಾದ್ ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮಹಿಳೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಆರೋಪಿಗಳು 50-60 ರೂಪಾಯಿಯಲ್ಲಿ ಏನು ಸಿಗುತ್ತೆ. 500 ರೂಪಾಯಿ ದಿನಕ್ಕೆ ದುಡಿಯುವ ಕೆಲಸ ಕೊಡಿಸುತ್ತೇವೆಂದು ಆಸೆ ತೋರಿಸಿದ್ದಾರೆ ಎನ್ನಲಾಗಿದೆ.

ನಂತ್ರ ಆರೋಪಿ ವ್ಯಕ್ತಿಯೊಬ್ಬನಿಗೆ ಮಹಿಳೆಯನ್ನು ಮಾರಾಟ ಮಾಡಿದ್ದಾನೆ. ಆತ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಮದುವೆಯಾಗಿದ್ದಲ್ಲದೆ ಚಿತ್ರ ಹಿಂಸೆ ನೀಡಿದ್ದಾನೆ. ಬಾಯಿಬಿಟ್ಟರೆ ಮಗಳನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ. ಇತ್ತ ಆರೋಪಿ ಮಗುವನ್ನು 50 ಸಾವಿರ ರೂಪಾಯಿಗೆ ಬೇರೆಯೊಬ್ಬರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.

ಮಾಹಿತಿಯೊಂದರ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಕಾಡಿನ ಮಧ್ಯೆ ಮನೆಯೊಂದರಲ್ಲಿ ಮಹಿಳೆ ಸಿಕ್ಕಿದ್ದಾಳೆ. ತನ್ನನ್ನು ಖರೀದಿ ಮಾಡಿದ್ದ ವ್ಯಕ್ತಿ ಪ್ರತಿ ರಾತ್ರಿ ತನ್ನನ್ನು ರೇಪ್ ಮಾಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರಿಗೆ ದೇವಸ್ಥಾನದ ಬಳಿ ಮಗು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯ ಶುರುವಾಗಿದೆ. ಮಹಿಳೆಯನ್ನು ಈ ಹಿಂದೆ ಮದುವೆಯಾಗಿದ್ದ ಪತಿ ಕುಡುಕನಾಗಿದ್ದನಂತೆ. ಹೆರಿಗೆಗೂ ಮುನ್ನವೇ ಪತಿಯಿಂದ ದೂರವಾದ ಮಹಿಳೆ ಬೇರೆ ವಾಸವಾಗಿದ್ದಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...