alex Certify
ಕನ್ನಡ ದುನಿಯಾ       Mobile App
       

Kannada Duniya

16ರ ಹುಡುಗಿಯನ್ನು 2 ಲಕ್ಷಕ್ಕೆ ಖರೀದಿ ಮಾಡ್ದ 50ರ ಪುರುಷ

ಲಿಂಗಾನುಪಾತನದಲ್ಲಿ ಭಾರೀ ವ್ಯತ್ಯಾಸವಾಗಿರುವುದ್ರಿಂದ ರಾಜಸ್ತಾನದಲ್ಲಿ ಅವಿವಾಹಿತ ಪುರುಷರ ಸಂಖ್ಯೆ ಹೆಚ್ಚಾಗ್ತಿದೆ. ಹುಡುಗಿಯರ ಸಮಸ್ಯೆ ಕಡಿಮೆ ಮಾಡಲು ಕಳ್ಳಸಾಗಣೆ ದಂಧೆ ಶುರುವಾಗಿದೆ. ಪುರುಷರು ತಮ್ಮ ವಯಸ್ಸಿಗಿಂತ ಮೂರು ಪಟ್ಟು ಚಿಕ್ಕ ವಯಸ್ಸಿನ ಹುಡುಗಿಯರನ್ನು ಖರೀದಿ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಕರಣಗಳು ಬಯಲಿಗೆ ಬಂದಿವೆ. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಟ ನಡೆಸುತ್ತಿರುವ ಎನ್ ಜಿಒ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ವಿಷ್ಯಗಳು ಬಯಲಿಗೆ ಬಂದಿವೆ. ರಾಜಸ್ತಾನದ ಯುವಕರು ಅಸ್ಸಾಂ, ಮೇಘಾಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹುಡುಗಿಯರನ್ನು ಖರೀದಿ ಮಾಡುತ್ತಿದ್ದಾರೆ.

ಬೇರೆ ರಾಜ್ಯಕ್ಕೆ ಹುಡುಗಿ ಹುಡುಕಲು ಹೋಗುವ ಯುವಕರು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಆಯ್ಕೆ ಮಾಡಿ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಹಣ ನೀಡ್ತಿದ್ದಾರೆ. 2-3 ಲಕ್ಷ ರೂಪಾಯಿ ಕೊಟ್ಟು ಹುಡುಗಿ ಖರೀದಿ ಮಾಡಿ ರಾಜಸ್ತಾನಕ್ಕೆ ಕರೆ ತರ್ತಾರೆ. ರಾಜಸ್ತಾನದಲ್ಲಿ ಹುಡುಗಿಯರು ನರಕ ಅನುಭವಿಸ್ತಾರೆ. ಲೈಂಗಿಕ ಶೋಷಣೆ ಕೂಡ ನಡೆಯುತ್ತದೆ. ಖರೀದಿ ಮಾಡಿ ರಾಜಸ್ತಾನಕ್ಕೆ ಹುಡುಗಿಯನ್ನು ಕರೆ ತಂದ ಯುವಕರು ಹೆಚ್ಚಿನ ಹಣಕ್ಕೆ ಈ ಹುಡುಗಿಯರನ್ನು ಹೆಚ್ಚು ವಯಸ್ಸಾಗಿರುವ ಪುರುಷರಿಗೆ ಮಾರಾಟ ಮಾಡ್ತಾರೆ. 50 ವರ್ಷದ ಪುರುಷರು 16-17 ವರ್ಷದ ಹುಡುಗಿಯನ್ನು ಖರೀದಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...