alex Certify
ಕನ್ನಡ ದುನಿಯಾ       Mobile App
       

Kannada Duniya

ಶತ್ರುಗೂ ಬೇಡ ಈ ನೋವು

FotorCreated4

ಫೋಟೋದಲ್ಲಿರುವ ಇವರನ್ನು ನೋಡಿದ್ರೆ ವಿಚಿತ್ರ ಎನ್ನಿಸದೆ ಇರದು. ನೋಡಿದ ತಕ್ಷಣ ವಯಸ್ಸು 60-70 ಇರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ಇವರ ವಯಸ್ಸು ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಯಾಕೆಂದ್ರೆ ಇವರಿಗೆ 60 ವರ್ಷವಾಗಿಲ್ಲ, ಒಬ್ಬನಿಗೆ 7 ವರ್ಷ, ಇನ್ನೊಬ್ಬಳ ವಯಸ್ಸು ಇನ್ನೂ 18 ತಿಂಗಳು.

ರಾಂಚಿಯಲ್ಲಿ ನೆಲೆಸಿರುವ ಕೇಶವ್ ಕುಮಾರ್ (ಎಡ) ಮತ್ತು ಅಂಜಲಿ ಕುಮಾರಿ (ಬಲಿ) ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅಕಾಲ ವೃದ್ಧಾಪ್ಯದ ಈ ಖಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದು ಪಾಲಕರ ನೋವಿಗೆ ಕಾರಣವಾಗಿದೆ. ಮಕ್ಕಳ ರೋಗ ಗುಣಪಡಿಸಿ ಎಂದು ಪಾಲಕರು ಬೇಡಿಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು 500 ರೂಪಾಯಿ ಖರ್ಚು ಮಾಡ್ತಿದ್ದಾರೆ.

ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪಾಲಕರಿಗೆ ಇವರಿಬ್ಬರ ಖಾಯಿಲೆ ದೊಡ್ಡ ತಲೆ ನೋವಾಗಿದೆ. ಮಕ್ಕಳು ಕೂಡ ಮನೆಯಿಂದ ಹೊರಗೆ ಹೋಗಲು ಇಷ್ಟಪಡುತ್ತಿಲ್ಲ. ನೆರೆಯ ಮಕ್ಕಳ ನಿಂದನೆ ಇವರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಖಾಯಿಲೆಯಿಂದಾಗಿ ಮಕ್ಕಳು ಉಸಿರಾಟದ ತೊಂದರೆ, ಕೀಲು ನೋವಿನಿಂದ ಬಳಲುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...