alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರಿಗೆ ಮುಡಿ ಕೊಟ್ಟ ಕೂದಲನ್ನೂ ಬಿಡಲಿಲ್ಲ ಖದೀಮರು

Tight crop of shiny dark brown hair.

ವಿಶಾಖಪಟ್ಟಣಂ: ತಮ್ಮ ಕಷ್ಟ ಕಾರ್ಪಣ್ಯ ತೀರಿದ ಸಂತಸದಲ್ಲಿ ಭಕ್ತರು, ದೇವರಿಗೆ ಮುಡಿ ನೀಡಿದ ಕೂದಲಿನ ಮೇಲೂ ಕಳ್ಳರ ಕಣ್ಣು ಬಿದ್ದಿದೆ. ಈ ರೀತಿ ದೇವರಿಗೆ ಆರ್ಪಿಸಿದ 10 ಲಕ್ಷ ರೂ. ಮೌಲ್ಯದ ಕೂದಲನ್ನು ಈಗ ಕಳ್ಳರು ಕದ್ದೊಯ್ದಿದ್ದಾರೆ.

ಆಂಧ್ರ ಪ್ರದೇಶದ ಸಿಂಹಾಚಲಂನಲ್ಲಿರುವ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಭಕ್ತರು ಆರ್ಪಿಸಿದ ಕೂದಲನ್ನು ಅವುಗಳ ಉದ್ದದ ಆಧಾರದ ಮೇಲೆ ವಿಂಗಡಿಸಿ ಕೊಠಡಿಯೊಂದರಲ್ಲಿಟ್ಟಿದ್ದ ವೇಳೆ ಆರ್ ಸಿ ಸಿ ಮೇಲಿನಿಂದ ಗ್ರಿಲ್ ಕತ್ತರಿಸಿ ಒಳ ಪ್ರವೇಶಿಸಿರುವ ಕಳ್ಳರು ‘ಸ್ಪೆಷಲ್ ಗ್ರೇಡ್’ ಕೂದಲನ್ನು ಹಾಕಿಟ್ಟಿದ್ದ 10 ಬ್ಯಾಗ್ ಗಳನ್ನು ಕಳವು ಮಾಡಿದ್ದಾರೆ.

ಈ ಕುರಿತು ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಈ ಕಳ್ಳತನಕ್ಕೆ ದೇವಾಲಯದ ಒಳಗಿನ ವ್ಯಕ್ತಿಗಳೂ ಸಹಕಾರ ನೀಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳವು ಮಾಡಿದ ಕೂದಲಿನ ಮೌಲ್ಯ 10 ಲಕ್ಷ ರೂ.ಗಳೆಂದು ಹೇಳಲಾಗಿದ್ದು, ‘ಸ್ಪೆಷಲ್ ಗ್ರೇಡ್’ ಕೂದಲು ಸಂಗ್ರಹಿಸಿಟ್ಟಿದ್ದ ಬ್ಯಾಗ್ ಗಳನ್ನು ಮಾತ್ರ ಹೊತ್ತೊಯ್ದಿರುವ ಕಾರಣ ಗೊತ್ತಿದ್ದವರೇ ಈ ಕೃತ್ಯ ಮಾಡಿದ್ದಾರೆಂಬ ಅನುಮಾನ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...