alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಹರಿದಾಡ್ತಿದೆ ಯುಪಿ ಪೊಲೀಸರ ಲಂಚದ ರೇಟ್ ಕಾರ್ಡ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶವೊಂದು ಉತ್ತರ ಪ್ರದೇಶ ಪೊಲೀಸರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಈ ಸಂದೇಶದಲ್ಲಿ ಖರ್ಚು ಮಾಡಿದ ವಿವರವಿದ್ದು, ಜೊತೆಗೆ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಲಂಚದ ಮಾಹಿತಿಯೂ ಇದೆ.

ಲಂಚದ ಹಣ ಪಡೆಯುವುದಕ್ಕೆ ಸಂಬಂಧಿಸಿದಂತೆ ಪೊಲೀಸರ ನಡುವೆ ನಡೆದ ಕಚ್ಚಾಟದ ಬಳಿಕ ಬೇಕೆಂದೇ ಲಂಚದ ರೇಟ್ ಕಾರ್ಡ್ ಇರುವ ಈ ವಾಟ್ಸಾಪ್ ಸಂದೇಶವನ್ನು ಬಹಿರಂಗ ಮಾಡಲಾಗಿದೆ ಎನ್ನಲಾಗುತ್ತಿದ್ದು, ವೈರಲ್ ಆಗಿದ್ದ ಈ ವಾಟ್ಸಾಪ್ ಸಂದೇಶವನ್ನು ಬಳಿಕ ಪೇದೆಯೊಬ್ಬರು ನೇರವಾಗಿ ಡಿಜಿಪಿಗೆ ಫಾರ್ವರ್ಡ್ ಮಾಡಿದ್ದರು.

ಈಗ ನೋಯ್ಡಾದ ಎಸ್.ಎಸ್.ಪಿ. ಯವರಿಗೆ ತನಿಖೆ ನಡೆಸುವಂತೆ ಸೂಚಿಸಿರುವ ಡಿಜಿಪಿ, ನೋಯ್ಡಾ ವಿಶೇಷ ತನಿಖಾ ದಳದ 18 ಮಂದಿ ಅಧಿಕಾರಿಗಳಿಗೆ ಹಿಂಬಡ್ತಿ ನೀಡಿದ್ದಾರೆ. 

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲಾಗಿತ್ತಲ್ಲದೇ ಸಮಾಜಘಾತುಕ ಶಕ್ತಿಗಳನ್ನು ಬಗ್ಗು ಬಡಿಯಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಇದುವರೆಗೂ 1,478 ಎನ್ ಕೌಂಟರ್ ಗಳು ನಡೆದಿದ್ದು, 50 ಕ್ಕೂ ಅಧಿಕ ಮಂದಿ ಕ್ರಿಮಿನಲ್ಸ್ ಗಳನ್ನು ಹತ್ಯೆ ಮಾಡಲಾಗಿದೆ. ಎನ್ ಕೌಂಟರ್ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಮಧ್ಯೆ ಈಗ ಲಂಚದ ರೇಟ್ ಕಾರ್ಡ್ ಬಹಿರಂಗವಾಗಿರುವುದು ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...