alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ನಲ್ಲಿ ಮಾತ್ರವಲ್ಲ ಅಧಿಕಾರಿಗಳ ನೇಮಕಕ್ಕೂ ಹಾಕಿದ್ದಾರೆ ಟಾಸ್

ಪಂಜಾಬ್ ನ ತಾಂತ್ರಿಕ ಶಿಕ್ಷಣ ಸಚಿವ ಚರಣ್ಜಿತ್ ಸಿಂಗ್ ಚನ್ನಿ ಹೊಸ ಟ್ರೆಂಡ್ ಗೆ ನಾಂದಿ ಹಾಡಿದ್ದಾರೆ. ನಾಣ್ಯವನ್ನು ಟಾಸ್ ಮಾಡುವ  ಮೂಲಕ ತಮ್ಮ ಇಲಾಖೆಗೆ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಯಾವ್ಯಾವ ಹುದ್ದೆಗೆ ಯಾರನ್ನು ನೇಮಿಸಬೇಕೆಂದು ನಿರ್ಧರಿಸಿದ್ದಾರೆ.

ಅಧಿಕಾರಿಗಳ ನೇಮಕಕ್ಕೆ ಟಾಸ್ ಹಾಕೋದ್ರಲ್ಲಿ ಯಾವುದೇ ತಪ್ಪಿಲ್ಲ ಅಂತಾನೂ ಹೇಳಿದ್ದಾರೆ. ಒಂದೇ ಹುದ್ದೆಗೆ ಇಬ್ಬರು ಆಕಾಂಕ್ಷಿಗಳಿದ್ರು. ತಾರತಮ್ಯ ಮಾಡಿದ್ದಾರೆ ಅನ್ನೋ ಆರೋಪ ಬರಬಾರದೆಂಬ ಕಾರಣಕ್ಕೆ ಟಾಸ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.

ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮೆಕ್ಯಾನಿಕಲ್ ಲೆಕ್ಚರರ್ ಗಳ ನೇಮಕಾತಿ ವೇಳೆ ನಡೆದ ಪ್ರಕ್ರಿಯೆ ಇದು. ಒಟ್ಟು 37 ಲೆಕ್ಚರರ್ ಗಳನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ ಒಂದು ಹುದ್ದೆಗೆ ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ವಿಶೇಷ ಅಂದ್ರೆ ಎಲ್ಲಾ ಪ್ರಾಧ್ಯಾಪಕರನ್ನು ಕರೆದು ಅವರ ಇಷ್ಟದ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಲು ಸಚಿವರು ಅವಕಾಶ ಕಲ್ಪಿಸಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...