alex Certify
ಕನ್ನಡ ದುನಿಯಾ       Mobile App
       

Kannada Duniya

ಮೂವರು ದಂಪತಿಗಳಲ್ಲಿ ಯಾರ ಮಗಳು ಗೀತಾ?

ಎರಡು ವರ್ಷಗಳ ಹಿಂದೆ ಪಾಕಿಸ್ತಾನದಿಂದ ವಾಪಸ್ ಬಂದಿರುವ ವಿಕಲಾಂಗೆ ಗೀತಾ ಕುಟುಂಬಸ್ಥರ ಕಾಯುವಿಕೆ ಅಂತ್ಯವಾಗಲಿದೆ. ಸೋಮವಾರ ಮಹಾರಾಷ್ಟ್ರ,  ಬಿಹಾರ, ಜಾರ್ಖಂಡ್ ಮೂರು ಕಡೆಯಿರುವ ಗೀತಾ ಪಾಲಕರು ಗೀತಾರನ್ನು ಭೇಟಿಯಾಗಲಿದ್ದಾರೆ. ಗೀತಾ ತಮ್ಮ ಮಗಳೆಂದು ಮೂರು ಪಾಲಕರು ಹೇಳಿಕೆ ನೀಡಿದ್ದಾರೆ. ಹಾಗಾಗಿ ಮೂವರಿಗೂ ಭೇಟಿಗೆ ಅವಕಾಶ ನೀಡಲಾಗ್ತಿದೆ. ಅವಶ್ಯಕತೆ ಬಿದ್ದಲ್ಲಿ ಡಿಎನ್ ಎ ಪರೀಕ್ಷೆ ನಡೆಸುವುದಾಗಿ ಮೂಲಗಳು ಹೇಳಿವೆ.

ಗೀತಾ ನಾಪತ್ತೆಯಾದ ತಮ್ಮ ಮಗಳೆಂದು 10ಕ್ಕೂ ಹೆಚ್ಚು ಕುಟುಂಬಗಳು ಹೇಳಿವೆ. ಆದ್ರೆ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಬಿಹಾರ್ ನಲ್ಲಿರುವ ಮೂರು ಕುಟುಂಬಗಳ ಹೇಳಿಕೆ ಮಾತ್ರ ಗೀತಾ ಪ್ರಕರಣಕ್ಕೆ ಹೋಲಿಕೆಯಾಗ್ತಿದೆ. ಹಾಗಾಗಿ ಈ ಮೂರು ಕುಟುಂಬಗಳಿಗೆ ಗೀತಾ ಭೇಟಿಗೆ ಅವಕಾಶ ನೀಡಲಾಗಿದೆ. ಗೀತಾ ಡಿ ಎನ್ ಎ ಹಾಗೂ ಈ ಮೂರು ಕುಟುಂಬಸ್ಥರ ಡಿ ಎನ್ ಎ ಪರೀಕ್ಷೆ ನಡೆಸಿ ಯಾರ ಮಗಳೆಂದು ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ.

ಗೀತಾ ಅಪ್ಪಿತಪ್ಪಿ ಗಡಿದಾಟಿ ಪಾಕಿಸ್ತಾನಕ್ಕೆ ಹೋಗಿದ್ದಳು. ಒಂದು ದಶಕಗಳ ಕಾಲ ಅಲ್ಲಿಯೇ ಇದ್ದ ಗೀತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವಿನಿಂದ ಅಕ್ಟೋಬರ್ 26, 2015 ರಂದು ಭಾರತಕ್ಕೆ ವಾಪಸ್ ಆಗಿದ್ದಳು. ಆದ್ರೆ ಆಕೆ ಪಾಲಕರು ಯಾರೆಂಬುದು ಸ್ಪಷ್ಟವಾಗ್ತಿಲ್ಲ. ಗೀತಾಗೆ ಕಿವಿ ಕೇಳುವುದಿಲ್ಲ. ಮಾತನಾಡಲು ಬರುವುದಿಲ್ಲ. ಹಾಗಾಗಿ ಸದ್ಯ ಗೀತಾ ಇಂದೋರ್ ನಲ್ಲಿರುವ ಕಿವುಡರ ಕೇಂದ್ರದಲ್ಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...