alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವೆಗೆ ಮನುಸ್ಮೃತಿ ಇರಾನಿ ಎಂದ ಕಾಂಗ್ರೆಸ್ ನಾಯಕ

smriti-irani 237ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಪ್ರಕರಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ತಳೆದಿರುವ ನಿಲುವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕ ಎಸ್. ಜೈಪಾಲ್ ರೆಡ್ಡಿ, ಅವರು ಸ್ಮೃತಿ ಇರಾನಿಯಲ್ಲ. ಮನು ಸ್ಮೃತಿ ಇರಾನಿ ಎಂದು ವ್ಯಂಗ್ಯವಾಡಿದ್ದಾರೆ.

ತೆಲಂಗಾಣ ಕಾಂಗ್ರೆಸ್ ವತಿಯಿಂದ ಹೈದರಾಬಾದಿನಲ್ಲಿ ಏರ್ಪಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಸ್ಮೃತಿ ಇರಾನಿಯವರ ಹೃದಯದಲ್ಲಿ ಇನ್ನೂ ಮನು ನೆಲೆಸಿದ್ದಾನೆ. ವರ್ಣಾಶ್ರಮ ಪ್ರತಿಪಾದಿಸಿದ್ದ ಮನುವಿನ ರೀತಿಯಲ್ಲಿಯೇ ಸ್ಮೃತಿ ಇರಾನಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿದ್ದರು ಎಂದು ಹೇಳಿದ ಜೈಪಾಲ್ ರೆಡ್ಡಿ, ಜವಾಹರ್ ಲಾಲ್ ನೆಹರು ಹಾಗೂ ಅಂಬೇಡ್ಕರ್, ಹಿಂದೂ ಕೋಡ್ ಬಿಲ್ ಬೆಂಬಲಿಸಿದ್ದರೆ ಭಾರತೀಯ ಜನ ಸಂಘದ ಶ್ಯಾಮ್ ಪ್ರಸಾದ್ ಮುಖರ್ಜಿ ಇದನ್ನು ವಿರೋಧಿಸಿದ್ದರು ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...